ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಇದೀಗ ಮತ್ತೆ ಕಿರಿಕ್ ಶುರುವಿಟ್ಟುಕೊಂಡಿದೆ. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿರುವ ಚೀನೀ ಸೈನಿಕರನ್ನು ಭಾರತದ ಸೈನಿಕರು ಹಿಮ್ಮೆಟ್ಟಿಸಿದ್ದಾರೆ.
ಟಿಬೆಟ್ ಕಡೆಯಿಂದ ಬಂದು ಭಾರತದ ಗಡಿಯೊಳಗೆ ಏಕಾಏಕಿ ನುಗ್ಗಿದ 200 ಸೈನಿಕರು ಭಾರತದ ಬಂಕ್ ಗಳನ್ನು ಹಾನಿ ಮಾಡಲು ಪ್ರಾರಂಭಿಸಿದರು. ಈ ವೇಳೆ ಎಲ್ಲಾ ಸೈನಿಕರು ಭಾರತದ ವಶಕ್ಕೆ ಪಡೆದಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದ್ದು ಇದಾದ ಬಳಿಕ ಸೇನಾ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದ ಬಳಿಕ ಡ್ರ್ಯಾಗನ್ ಸೈನಿಕರನ್ನು ಬಿಡುಗಡೆ ಮಾಡಲಾಗಿದೆ.
ಇದೇ ಭಾಗದಲ್ಲಿ ಚೀನಾ ಉದ್ದಟತನ ಮೆರೆಯುವುದು ಮೊದಲೇನಲ್ಲ, 2016ರಲ್ಲಿ ಚೀನಾ ಸೇನಾ ಪಡೆಗಳು ಯಾಂಗ್ಟ್ಸೆಯಲ್ಲಿ ಭಾರತೀಯ ಭಾಗದಲ್ಲಿ ಅತಿಕ್ರಮಣ ಮಾಡಿದ್ದವು. 2011ರಲ್ಲೂ ಭಾರತೀಯ ಭಾಗದ ಎಲ್ಎಸಿಯ 250 ಮೀಟರ್ ಉದ್ದದ ಗೋಡೆಯನ್ನು ಹಾನಿಗೊಳಿಸಿದ್ದರು.
ಅಫ್ಘಾನ್ ನಲ್ಲಿ ತಾಲಿಬಾನ್ ಆಡಳಿತ ಶುರುವಾದ ಬೆನ್ನಲ್ಲೇ ಪಾಕಿಸ್ತಾನ ಮತ್ತು ಚೀನಾ ಅಧಿಕೃತವಾಗಿಯೇ ಭಾರತದ ವಿರುದ್ಧ ಹೋರಾಡಲು ಕೈ ಜೋಡಿಸಿದ್ದು ಮತ್ತೆ ಕಿರಿಕ್ ಪ್ರಾರಂಭಿಸಿದೆ.
A face-off between the Indian and Chinese soldiers was reported from Arunachal Pradesh last week. As per the sources in the defence establishment, the face-off took place due to differences in perception of the Line of Actual Control. The engagement between the two sides lasted for a few hours and was resolved as per the existing protocols.
Discussion about this post