ನವದೆಹಲಿ : ಸಾಮಾಜಿಕ ಜಾಲತಾಣ ಲೋಕದ ದೈತ್ಯ ಸಂಸ್ಥೆಗಳ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ 9 ಗಂಟೆಗಳ ಕಾಲ ಕೈ ಕೊಟ್ಟಿದೆ. ರೂಟಿನ್ ಅಪ್ ಡೇಟ್ ಸಂದರ್ಭದಲ್ಲಿ ಫೈಲ್ ಮಿಸ್ ಆದ ಕಾರಣ ಈ ಎಡವಟ್ಟು ಸಂಭವಿಸಿದೆ ಎಂದು ಹೇಳಲಾಗಿದೆ.
ಈ ನಡುವೆ ಆಗಿರುವ ಯಡವಟ್ಟಿಗೆ ಕ್ಷಮೆ ಕೇಳಿರುವ ಜುಕರ್ ಬರ್ಗ್, I know how much you rely on our services to stay connected with the people you care about. ಅಂದಿದ್ದಾರೆ.
ಆದರೆ ಚಿಕ್ಕದೊಂದು ಪ್ರಮಾದಿಂದ ಆಗಿರುವ 9 ಗಂಟೆಗಳ ಸೋಷಿಯಲ್ ಮೀಡಿಯಾ ಬಂದ್ Mark Zuckerberg ಸಂಸ್ಥೆಗೆ ದೊಡ್ಡ ಹೊಡೆತ ಕೊಟ್ಟಿದೆ. ಫೇಸ್ ಬುಕ್ ಸೇವೆಯಲ್ಲಿ ಆಗಿರುವ ವ್ಯತ್ಯಯದಿಂದ ಫೇಸ್ ಬುಕ್ |ರು ಮೌಲ್ಯ ಶೇ 4.9 ಕುಸಿದಿದೆ. ಇದರಿಂದ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಕಳೆದ ತಿಂಗಳು ಫೇಸ್ ಬುಕ್ ಷೇರು ಮೌಲ್ಯ ಶೇ 15ರಷ್ಟು ಕುಸಿದಿತ್ತು. ಇದೀಗ ಮತ್ತೆ ಮತ್ತೊಂದು ಹೊಡೆತಕ್ಕೆ ಫೇಸ್ ಬುಕ್ ಗುರಿಯಾಗಿದೆ.
Discussion about this post