ಈ ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಜನಸಾಮಾನ್ಯರಿಗೆ ಇನ್ನಿಲ್ಲದ ಕುತೂಹಲ. ಸೆಲೆಬ್ರೆಟಿಗಳು ಎದ್ದರೂ ಸುದ್ದಿ ನಿಂತರೂ ಸುದ್ದಿ. ಇನ್ನು ಅವರ ಮನೆಯಲ್ಲಿ ಅದ್ಯಾವ ಕಾರ್ಯಕ್ರಮ ನಡೆದರೂ ಪ್ರಚಾರ ಸಿಗದಿರಲು ಸಾಧ್ಯವಿಲ್ಲ. ಇನ್ನು ಸಾಮಾಜಿಕ ಜಾಲತಾಣ ಬಂದ ಮೇಲೆ ಕೇಳುವುದೇ ಬೇಡ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸೆಲೆಬ್ರೆಟಿಗಳಿಗೆ ಪ್ರಚಾರ ಕೊಡುತ್ತಾರೆ.
ಅದರಲ್ಲೂ ಸೆಲೆಬ್ರೆಟಿಗಳ ಸಾಮಾಜಿಕ ಜಾಲತಾಣ ಖಾತೆ ಮೇಲೆ ಎಲ್ಲರಿಗೊಂದು ಕಣ್ಣು ನೆಟ್ಟಿರುತ್ತದೆ. ಹೀಗಾಗಿ ಯಾರು ಯಾರನ್ನೂ ಫಾಲೋ ಮಾಡಿದ್ರು, ಯಾರು ಯಾರನ್ನೂ ಅನ್ ಫಾಲೋ ಮಾಡಿದ್ರು ಅನ್ನುವುದು ಸದಾ ಸುದ್ದಿಯಾಗುತ್ತಿರುತ್ತದೆ. ಇದೆಲ್ಲಾ ವಿಷಯಕ್ಕೆ ಎನಕ್ಕೆ ಅಂದ್ರೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣವೊಂದು ಈಗ ಸದ್ದು ಮಾಡುತ್ತಿದೆ.
ಅಭಿನಯ ಚಕ್ರವರ್ತಿ, ಕನ್ನಡಿಗರ ಮಾಣಿಕ್ಯ ಕಿಚ್ಚ ಸುದೀಪ್ ತಮ್ಮ ನಟನೆ ಮಾತ್ರವಲ್ಲ ಸಾಧನೆಯ ಮೂಲಕ ಅಭಿಮಾನ ಸಂಪಾದಿಸಿರುವ ನಟ. ಹೀಗಾಗಿಯೇ ಸುದೀಪ್ ಸಾಮಾಜಿಕ ಜಾಲತಾಣ ಖಾತೆಯನ್ನು ಸಿಕ್ಕಾಪಟ್ಟೆ ಜನ ಫಾಲೋ ಮಾಡ್ತಾರೆ. ಆದರೆ ಸುದೀಪ್ ಮಾತ್ರ ಕೇವಲ ನಾಲ್ಕು ಜನರನ್ನು ಫಾಲೋ ಮಾಡ್ತಾರೆ. ಅದು ಇನ್ಸ್ಟಾ ಖಾತೆಯಲ್ಲಿ.
ಕಿಚ್ಚ ಸುದೀಪ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 14 ಲಕ್ಷ ಜನ ಫಾಲೋವರ್ಸ್ ಹೊಂದಿದ್ದ, ಸುದೀಪ್ ಮಾತ್ರ ಕೇವಲ ಐದು ಜನರನ್ನ ಫಾಲೋ ಮಾಡ್ತಿದ್ದಾರೆ. ಅದರಲ್ಲಿ ಒಬ್ಬರು ಕನ್ನಡದ ನಟಿ.
ಯಾರಪ್ಪ ಆ ಭಾಗ್ಯವಂತೆ ಅಂತೀರಾ, ಕಿಚ್ಚ ಸುದೀಪ್ ಫಾಲೋ ಮಾಡುತ್ತಿರುವ ನಟಿ ಬೇರಾರು ಅಲ್ಲ, ಜಂಭದಕೋಳಿ ಖ್ಯಾತಿಯ, ಕಾಂಗ್ರೆಸ್ ನಾಯಕಿ, ಚಂದನವನದ ಬಾಕ್ಸಾಫೀಸ್ ಪದ್ಮಾವತಿ ರಮ್ಯಾ. ಹಾಗೇ ನೋಡಿದರೆ ಕಿಚ್ಚ ಸುದೀಪ್ ಮತ್ತು ರಮ್ಯಾ ಅವರದ್ದು ಅದ್ಭುತ ಜೋಡಿ. ರಂಗ SSLC , ಜಸ್ಟ್ ಮಾತ್ ಮಾತಲ್ಲಿ , ಮುಸ್ಸಂಜೆ ಮಾತು ಹೀಗೆ ಹಲವು ಸಿನಿಮಾಗಳಲ್ಲಿ ಇವರಿಬ್ಬರು ಅಭಿಮಾನಿಗಳನ್ನು ಸೆಳೆದಿದ್ದಾರೆ.
ರಮ್ಯಾ ಅವರ ಜೀವನದ ಹಾದಿ ಬದಲಾದರೂ ಇವರಿಬ್ಬರ ನಡುವಿನ ಹಳೆಯ ಸಿನಿಮಾ ಸಂಬಂಧ ಬದಲಾಗಿಲ್ಲ. ಇಂದಿಗೂ ಸುದೀಪ್ ಅವರ ಬರ್ತ್ಡೇ ರಮ್ಯಾ, ರಮ್ಯಾ ಬರ್ತ್ಡೆಗೆ ಸುದೀಪ್ ಶುಭಾಶಯ ಹೇಳುತ್ತಾರೆ.
Discussion about this post