ಒಬ್ಬ ವ್ಯಕ್ತಿಯ ಬಳಿ ಎಷ್ಟು ಸಿಮ್ ಗಳಿರಬಹುದು ಅಂದ್ರೆ ಒಂದು ಹತ್ತು ಅನ್ನುವ ಲೆಕ್ಕ ಸಿಗಬಹುದು. ಅರೇ 10 ಸಿಮ್ ಗಳನ್ನು ಇಟ್ಟುಕೊಳ್ಳಬೇಕಾದ್ರೆ 5 ಮೊಬೈಲ್ ಇಟ್ಟುಕೊಳ್ಳಬೇಕಲ್ವ. ಕೆಲವರಿಗೆ ಅದೊಂದು ಹುಚ್ಚು, ಸಿಮ್ ಖರೀದಿಸೋದು, ನಾಲ್ಕು ದಿನ ಬಳಸೋದು ಆಮೇಲೆ ಬಿಸಾಕೋದು. ಆದರೆ ಇನ್ಮುಂದೆ ಹೀಗೆ ಮಾಡುವಂತಿಲ್ಲ.
ಸಿಕ್ಕಾಪಟ್ಟೆ ಸಿಮ್ ಖರೀದಿಸುವ ವ್ಯಕ್ತಿಗಳು, ಇದೇ ಸಿಮ್ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಇದೀಗ ದೂರ ಸಂಪರ್ಕ ಇಲಾಖೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ದೂರಸಂಪರ್ಕ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಭಾರತದಲ್ಲಿ ಇನ್ಮುಂದೆ ಹೊಸ ಸಿಮ್ ಖರೀದಿಸಲು ಗ್ರಾಹಕ ಸ್ವಾಧೀನ ನಮೂನೆ ಎಂಬ ಫಾರ್ಮ್ ಭರ್ತಿ ಮಾಡಬೇಕು. ಕೆಲವು ನಿಯಮ ಮತ್ತು ಷರತ್ತುಗಳೊಂದಿಗೆ ಬಂದಿರುವ ಈ ನಿಯಮಗಳಿಗೆ ಗ್ರಾಹಕರು ಅರ್ಹರಾಗಿರಬೇಕಿದ್ದು, ಅರ್ಹರಾಗಿದ್ದರೆ ಮಾತ್ರ ಸಿಮ್ ಸಿಗಲಿದೆ.
ಇದರೊಂದಿಗೆ ಒಬ್ಬ ವ್ಯಕ್ತಿ ಎಷ್ಟು ಸಿಮ್ ಹೊಂದಬಹುದು ಅನ್ನೋದನ್ನು ಕೂಡಾ ದೂರ ಸಂಪರ್ಕ ಇಲಾಖೆ ತಿಳಿಸಿದ್ದು, ಹೊಸ ನಿಯಮದಂತೆ, ದೇಶದ ಓರ್ವ ಪ್ರಜೆ ತನ್ನ ಹೆಸರಿನಲ್ಲಿ ಒಟ್ಟು 18 ಸಿಮ್ಗಳನ್ನು ಖರೀದಿಸಬಹುದು. ಇದರಲ್ಲಿ ಸಾಮಾನ್ಯ ಸಂವಹನಕ್ಕಾಗಿ 9 ಸಿಮ್ ಗಳು ಹಾಗೂ M2M ಸಂವಹನಕ್ಕಾಗಿ 9 ಸಿಮ್ಗಳನ್ನು ಖರೀದಿಸಬಹುದಾಗಿದೆ ಇನ್ನು ಗ್ರಾಹಕರು ತಮ್ಮ ಡಿವೈಸ್ ಬದಲಾಯಿಸಿದರೆ ಹೊಸ ವಿವರಗಳನ್ನು ಕಡ್ಡಾಯವಾಗಿ ತಮ್ಮ ನೆಟ್ ವರ್ಕ್ ಆಪರೇಟರ್ ಗಳಿಗೆ ಮಾಹಿತಿ ಸಲ್ಲಿಸಬೇಕಾಗುತ್ತದೆ.
ಇನ್ನು 18 ವರ್ಷದ ಕೆಳಗಿನ ವ್ಯಕ್ತಿಗಳಿಗೆ ಯಾವುದೇ ಕಂಪನಿಗಳು ಸಿಮ್ ವಿತರಿಸುವ ಹಾಗಿಲ್ಲ. ಒಟ್ಟಿನಲ್ಲಿ ಸಿಮ್ ಕಾರ್ಡ್ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಈ ಎಲ್ಲಾ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಅಂದ ಹಾಗೇ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ದುರಪಯೋಗ ಮಾಡಿಕೊಳ್ಳುತ್ತಿದ್ರೆ afcop.dgtelecom.gov.in ಲಾಗಿನ್ ಆಗಿ ವಿವರಗಳನ್ನು ನೋಡಬಹುದಾಗಿದೆ.
Discussion about this post