ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೆಲ ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಕರ್ನಾಟಕದಲ್ಲಿ ಠುಸ್ ಪಟಾಕಿಯಾಗಿದೆ. ಅನ್ನದಾತರು ಕರೆ ಕೊಟ್ಟಿದ್ದ ಬಂದ್ ಗೆ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಲಿಲ್ಲ. ಭಾರತ ಬಂದ್ ಅಗತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ರೈತ ಮುಖಂಡರು ವಿಫಲವಾಗಿರುವುದೇ ಇದಕ್ಕೆ ಕಾರಣ. ರೈತ ಸಂಘಟನೆ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿರುತ್ತಿದ್ರೆ ಭಾರತ ಬಂದ್ ಯಶಸ್ವಿಯಾಗುತ್ತಿತ್ತು.
ಈ ನಡುವೆ ದೆಹಲಿ ಸೇರಿದಂತೆ ಉತ್ತರದ ಅನೇಕ ರಾಜ್ಯಗಳು ಹೋರಾಟ ತೀವ್ರವಾಗಿತ್ತು, ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಹೆದ್ದಾರಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರಣ ಜನ ಸಾಮಾನ್ಯರು ಪರದಾಡುವಂತಾಯ್ತು. ಅದರಲ್ಲೂ ಘಾಜಿಪುರದಲ್ಲಿ ಹೆದ್ದಾರಿ, ಉತ್ತರ ಪ್ರದೇಶ-ದೆಹಲಿ ಮಾರ್ಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಚಂಡೀಗಢದಲ್ಲೂ ರೈತರು ಪ್ರತಿಭಟನೆ ನಡೆಸಿದ್ದು ದೆಹಲಿ ಸಂಪರ್ಕಿಸುವ ಹರಿಯಾಣ- ಪಂಜಾಬ್ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದ ಕಾರಣ ಅಲ್ಲೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಹೆದ್ದಾರಿಗಳಿಗೆ ಟ್ರ್ಯಾಕ್ಟರ್ ತಂದ ಕಾರಣ ವಾಹನ ಸವಾರರು ತುರ್ತು ವಾಹನಗಳು ಗಂಟೆ ಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಾಯ್ತು.
Discussion about this post