ನವದೆಹಲಿ : ದೆಹಲಿ ರೋಹಿಣಿ ಕೋರ್ಟ್ ಆವರಣದಲ್ಲಿ ಎರಡು ಗ್ಯಾಂಗ್ ಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಗ್ಯಾಂಗ್ ಸ್ಟಾರ್ ಜಿತೇಂದ್ರ ಗೋಗಿಯ ವೈರಿಗಳು ಮೊದಲು ದಾಳಿಯನ್ನು ನಡೆಸಿದ್ದು, ದಾಳಿಯಲ್ಲಿ ಗೋಗಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕೋರ್ಟ್ ಆವರಣದೊಳಗೆ ಗನ್, ರಿವಾಲ್ವರ್ ಗಳು ಹೇಗೆ ಬಂತು ಅನ್ನುವ ಪ್ರಶ್ನೆ ಎದ್ದಿದ್ದು, ಭದ್ರತಾ ಲೋಪ ನಡೆದಿರುವುದು ಸ್ಪಷ್ಟವಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಪೊಲೀಸರ ಮಾಹಿತಿಯ ಪ್ರಕಾರ ವಕೀಲರ ಡ್ರೆಸ್ ಹಾಕಿಕೊಂಡು ಬಂದ ಇಬ್ಬರು ವ್ಯಕ್ತಿಗಳು ಗೋಗಿಯ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದು, ಈ ವೇಳೆ ಪೊಲೀಸರು ಕೂಡಾ ಪ್ರತಿದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಈ ಪೈಕಿ ಇಬ್ಬರು ರೌಡಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
gangster Jitender Gogi, who was earlier this year found operating freely from behind the bars, was killed during firing at Delhi’s Rohini court on Friday. Initial information said that he was shot dead by rivals, while three others have been killed and some have been injured too.
Discussion about this post