ಚೆನ್ನೈನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಿನ ಮಳೆಯಾದರೆ ಅದರ ಪ್ರಯೋಜನ ತಮಿಳುನಾಡಿಗೆ ದೊರಕುತ್ತವೆ ಎಂದರು.
ಅನೇಕ ಕಡೆ ಘನತ್ಯಾಜ್ಯದಿಂದ ವಿದ್ಯುತ್ ತಯಾರಿಸಲಾಗುತ್ತಿದೆಯಾದರೂ ಇದರಲ್ಲಿ ಪರಿಪೂರ್ಣ ಯಶಸ್ಸು ಲಭ್ಯವಾಗಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದರು.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ನೊಂದಿಗೆ (Greater Chennai Corporation) ಸಭೆಯಲ್ಲಿ ಭಾಗವಹಿಸೋ ಸಲುವಾಗಿ ಚೆನ್ನೈಗೆ ತೆರಳಿದ ಡಿಕೆ ಶಿವಕುಮಾರ್ ಚೆನ್ನೈ ಕಾರ್ಪೊರೇಷನ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾತನಾಡಿದ ಅವರು ಇಲ್ಲಿ ನಗರವನ್ನು ತುಂಬಾ ಚೆನ್ನಾಗಿ ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. ಸಿಎನ್ಜಿ (ನೈಸರ್ಗಿಕ ಅನಿಲ) ಮತ್ತು ತ್ಯಾಜ್ಯ ನಿರ್ವಹಣೆಯ ಸ್ಥಾನವೂ ಉತ್ತಮವಾಗಿದೆ. ಇಲ್ಲಿ ಕಲಿಯಲು ಬಹಳಷ್ಟು ವಿಷಯಗಳಿವೆ. ಇಲ್ಲಿನ ಕೆಲವು ವಿಚಾರಗಳನ್ನು ನಾವು ಕಾರ್ಯಗತಗೊಳಿಸುತ್ತೇವೆ ಅಂದಿದ್ದಾರೆ.
ಇದೇ ವೇಳೆ ಚೆನ್ನೈನ ಚೆಟ್ಪೇಟ್ನಲ್ಲಿರುವ ಬಯೋ ಸಿಎನ್ಜಿ ಪ್ಲಾಂಟ್ಗೆ 15ಕ್ಕೂ ಹೆಚ್ಚು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು ಘನತ್ಯಾಜ್ಯ ನಿರ್ವಹಣೆ ಮತ್ತು ಅನಿಲ ಉತ್ಪಾದನೆ, ಸಿಎನ್ಜಿ ಉತ್ಪಾದನೆ ಹೇಗೆ ಎಂಬುದನ್ನು ಪರಿಶೀಲಿಸಿದರು.