ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರ ಎಂದು ಕರೆಸಿಕೊಂಡಿರುವ ವಿಧಾನಸೌಧಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಇದೊಂದು ರೀತಿಯಲ್ಲಿ ದೇವಸ್ಥಾನ. ಆದರೆ ಖಾದಿ ಮಂದಿ ಇಲ್ಲಿ ನಡೆಸುವ ಅಪಚಾರಗಳಿಗೆ ಮಿತಿ ಇಲ್ಲದಂತಾಗಿದೆ. ಇಲ್ಲಿ ಅದೆಷ್ಟು ಡೀಲ್ ಗಳು ನಡೆಯುತ್ತದೆ, ಅದೆಷ್ಟು ಕಂತೆ ಕಂತೆ ಹಣ ಕೈ ಬದಲಾಯಿಸುತ್ತಿದೆ ಅನ್ನುವುದು ಇಲ್ಲಿ ಪ್ರತೀ ಕಂಬಗಳಿಗೂ ಗೊತ್ತು.
ಆದರೆ ಈ ತನಕ ಇಲ್ಲಿ ಎಣ್ಣೆ ಪಾರ್ಟಿ ನಡೆದಿರುವ ಬಗ್ಗೆ ಸುದ್ದಿಯಾಗಿರಲಿಲ್ಲ. ಇದೀಗ ಅದು ಕೂಡಾ ಇಲ್ಲಿ ನಡೆದಿರುವುದು ಸಾಬೀತಾಗಿದೆ. ಅದು ಕೂಡಾ ವಿಧಾನಮಂಡಲ ಅಧಿವೇಶನ ನಡೆಯುವ ದಿನವೇ ಬಹಿರಂಗವಾಗಿದೆ ಅನ್ನುವುದು ದುರಂತವೇ ಸರಿ.
ವಿಧಾನಸೌಧದ ರೂಮ್ ಸಂಖ್ಯೆ 208 ರ ಪಕ್ಕದ ಸಿಂಕ್ ಬಳಿ ಎರಡು ಬಿಯರ್ ಬಾಟಲಿಗಳು ಸಿಕ್ಕಿದ್ದು, ವಿಧಾನಸೌಧದಲ್ಲಿ ಕೇವಲ ಡೀಲ್ ಗಳು ಮಾತ್ರವಲ್ಲದೆ ಪಾರ್ಟಿಗಳು ಕೂಡಾ ನಡೆಯುತ್ತದೆ ಅನ್ನುವುದಕ್ಕೆ ಸಾಕ್ಷಿ ದೊರೆತಿದೆ. ಇನ್ನು ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ತನಿಖೆ ನಡೆಸುತ್ತೇವೆ ಅಂದಿದ್ದಾರೆ.
Beer Bottles Found In Vidhana Soudha
Discussion about this post