ಅಫ್ಘಾನಿಸ್ತಾನದಲ್ಲಿ ಮತ್ತೆ ರಕ್ತ ಮೆತ್ತಿದ ಕೈಗಳು ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಹಾಗಂತ ಈ ಸರ್ಕಾರದ ವ್ಯಾಲಿಡಿಟಿ ಡೇಟ್ ತುಂಬಾ ಇರೋದಿಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಅವರಲ್ಲೇ ಇದೀಗ ಒಳ ಜಗಳಗಳು ಶುರುವಾಗಿದೆ. ಜೊತೆಗೆ ತಾಲಿಬಾನ್ ನಲ್ಲಿ ತಮ್ಮದೇ ಮಾತು ನಡೆಯಬೇಕು ಎಂದು ಚೀನಾ, ಪಾಕಿಸ್ತಾನ, ಕತಾರ್ ಬಯಸುತ್ತಿದೆ. ಇದೇ ಕಾರಣದಿಂದ ತಾಲಿಬಾನಿ ನಾಯಕನಿಗೆ ಪಟ್ಟಾಭಿಷೇಕವಾದ ಕೆಲವೇ ದಿನಗಳಲ್ಲಿ ಅಸಲಿ ಆಟ ಶುರು.
ಇನ್ನು ಅಮೆರಿಕಾ ಸೇನೆ ಅಫ್ಘಾನ್ ನೆಲದಿಂದ ಹಿಂದಕ್ಕೆ ಹೋಗಲು ನಿರ್ಧರಿಸಿದ ಬೆನ್ನಲ್ಲೇ ತಾಲಿಬಾನಿಗಳು ಅಟ್ಟಹಾಸಗೈಯಲು ಹಾತೊರೆಯುತ್ತಿದ್ದರು. ಅದರಲ್ಲೂ ಅಮೆರಿಕಾ ಹಾಗೂ ಬ್ರಿಟನ್ ಸೈನಿಕರು ಸಿಕ್ರೆ ರುಂಡ ಚೆಂಡಾಡಲು ನಿರ್ಧರಿಸಿದ್ದರು. ಹಾಗಂತ ಅದು ಸುಲಭವಿರಲಿಲ್ಲ. ಈ ಅಪಾಯದ ಅರಿವಿದ್ದೇ ಅಮೆರಿಕಾ ಸಾಕಷ್ಟು ಎಚ್ಚರಿಕೆಯನ್ನು ಕೈಗೆತ್ತಿಕೊಂಡಿತ್ತು.
Discussion about this post