33 ವರ್ಷದ ವ್ಯಕ್ತಿಯೊಬ್ಬ ನೊಕಿಯಾ 3310 ಮೊಬೈಲ್ ಸೆಟ್ ನುಂಗಿದ ಘಟನೆ ಯುರೋಪ್ ನ ಕೊಸೋವಾದ ಪ್ರಿಸ್ಟಿನಾದಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಮನೆಯವರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ತಕ್ಷಣ ಆಪರೇಷನ್ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಆಪರೇಷನ್ ನಡೆಸಿದ ವೈದ್ಯರೇ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈದ್ಯರ ಪ್ರಕಾರ ಇದೊಂದು ಅಪಾಯಕಾರಿ ಘಟನೆಯಾಗಿದ್ದು, ಒಂದು ವೇಳೆ ಹೊಟ್ಟೆಯಲ್ಲಿ ಬ್ಯಾಟರಿ ಸ್ಫೋಟಗೊಂಡಿದ್ದರೆ ವ್ಯಕ್ತಿ ಸಾಯುವ ಸಾಧ್ಯತೆಗಳು ಹೆಚ್ಚಿತ್ತು ಅಂದಿದ್ದಾರೆ.
ವ್ಯಕ್ತಿಯೊಬ್ಬ ಯಾವುದೋ ವಸ್ತು ನುಂಗಿ ನರಳಾಡುತ್ತಿದ್ದಾನೆ ಅನ್ನುವ ಕರೆ ಬಂತು, ತಕ್ಷಣ ಆಸ್ಪತ್ರೆಗೆ ತೆರಳಿ ವ್ಯಕ್ತಿಯ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಮೊಬೈಲ್ ಮೂರು ಭಾಗಗಳಾಗಿರುವುದು ಕಂಡು ಬಂತು. ಹೀಗಾಗಿ ಆಪರೇಷನ್ ಮಾಡಿ ಹೊರ ತೆಗೆದಿದ್ದೇವೆ ಅಂದಿದ್ದಾರೆ.
ಈ ವ್ಯಕ್ತಿ ಅದ್ಯಾಕೆ ಮೊಬೈಲ್ ನುಂಗಿದ್ದಾನೆ ಅನ್ನುವುದು ಇನ್ನೂ ಬಹಿರಂಗವಾಗಿಲ್ಲ.
Discussion about this post