ಸೆಲೆಬ್ರೆಟಿಗಳು ಬಳಸಿದ ಬಟ್ಟೆ, ಚಪ್ಪಲಿ ಶೂಗಳನ್ನು ಹರಾಜು ಹಾಕಿ ಹಣ ಸಂಗ್ರಹಿಸಿ ಅದನ್ನು ಒಳ್ಳೆಯ ಕೆಲಸಗಳಿಗೆ ಬಳಸುವುದು ಗೊತ್ತೇ ಇದೆ. ಮೊನ್ನೆ ಮೊನ್ನೆ ಸೆಲೆಬ್ರೆಟಿಯೊಬ್ಬ ಮೂಗು ಒರೆಸಿಕೊಂಡ ಟಿಶ್ಯೂ ಒಳ್ಳೆಯ ಮೊತ್ತಕ್ಕೆ ಹರಾಜುಗೊಂಡಿತ್ತು.
ಹಾಗಂತ ಸೆಲೆಬ್ರೆಟಿಯ ಅಂಡರ್ ವೇರ್ ಹರಾಜುಗೊಂಡಿರುವುದನ್ನು ಕೇಳಿದ್ದೀರಾ. ಇದೀಗ ಒಳ ಚಡ್ಡಿಯೂ ಹರಾಜುಗೊಳ್ಳುವ ಕಾಲ ಬಂದಿದೆ.ಅಮೆರಿಕಾದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೋರ್ಡನ್ ಅವರ ಒಂದು ಜೊತೆ ಒಳ ಉಡುಪನ್ನು ಹರಾಜಿಗೆ ಇಡಲಾಗಿದೆ. ಆರಂಭಿಕ ಮೊತ್ತ 500 ಡಾಲರ್ ನಿಗದಿಗೊಳಿಸಲಾಗಿದೆ.
ಈ ಒಳ ಚಡ್ಡಿಯನ್ನು ಹೋರ್ಡನ್ ತಮ್ಮ ಮಾಜಿ ಭದ್ರತಾ ಸಿಬ್ಬಂದಿ ಜಾನ್ ಮೈಕಲ್ ವೊಜ್ನಿ ಯಾಕ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಅದನ್ನೇ ಹರಾಜಿಗೆ ಇಡಲಾಗಿದೆ.
Discussion about this post