ಕೆಜಿಎಫ್ ಬಿಡುಗಡೆಗೂ ಮುನ್ನ ಇದೆಂಥಾ ಅಪಶಕುನದ ಮಾತು
ನಟ ಯಶ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದ್ಧಿ ಇದೀಗ ಹಲವು ಉಹಾಪೋಹಗಳನ್ನು ಸೃಷ್ಟಿಸಿದೆ.
KGF ಸಿನಿಮಾ ಯಶಸ್ಸು ಕಾಣಲಿ ಎಂದು ಕೈಗೊಂಡ ತೀರ್ಥಯಾತ್ರೆಯೇ ಇದೀಗ ಸಂಕಷ್ಟ ತಂದೊಡ್ಡಲಿದೆ ಅನ್ನುವ ಮಾತುಗಳಿಗೆ ಕಾರಣವಾಗಿದೆ.
ಕುಕ್ಕೆ ಕ್ಷೇತ್ರದಲ್ಲಿ ಹೆಲಿಕಾಪ್ಟರ್ ನಿಂದ ಇಳಿದವರು ತಮ್ಮ ಅಧಿಕಾರ, ಅಂತಸ್ತು ಕಳೆದುಕೊಳ್ಳುತ್ತಾರೆ ಅನ್ನುವುದು ಕರಾವಳಿಯಲ್ಲಿ ತಲೆ ತಲಾಂತರಗಳಿಂದ ಬಂದಿರುವ ನಂಬಿಕೆ. ಇದಕ್ಕೆ ಕಾರಣವೂ ಇದೆ. ಕರಾವಳಿ ಹೇಳಿ ಕೇಳಿ ದೇವರು ದೈವಗಳ ನೆಲೆವೀಡು. ಇಲ್ಲಿ ಸತ್ಯವನ್ನು ಮೆಚ್ಚಿಕೊಳ್ಳುವ ಅನೇಕ ಶಕ್ತಿಗಳಿವೆ. ಅಪಚಾರವಾದರೆ ಶಾಪ ಕೊಡುವ ದೈವಗಳು ಇಲ್ಲಿವೆ.
ಹೀಗಾಗಿಯೇ ರಾಜಕಾರಣಿಗಳು ಕುಕ್ಕೆಗೆ ಭೇಟಿ ನೀಡುವ ವೇಳೆ, ಧರ್ಮಸ್ಥಳ ಅಥವಾ ಬೇರೆ ಸ್ಥಳದಲ್ಲಿ ಹೆಲಿಕಾಫ್ಟರ್ ಇಳಿಸಿ ರಸ್ತೆ ಮಾರ್ಗದ ಮೂಲಕ ಆಗಮಿಸುತ್ತಾರೆ.
ಇದಕ್ಕೆ ಕಾರಣವೂ ಇದೆ. ರಾಜಕಾರಣಿಯೋ, ಸೆಲೆಬ್ರಿಟಿಯೋ ಹೆಲಿಕಾಪ್ಟರ್ ಮೂಲಕ ಕ್ಷೇತ್ರದ ಮೇಲೆ ಹಾರಾಟ ನಡೆಸಿದರೆ ಆತನ ಗ್ರಹಚಾರ ಕೆಟ್ಟಿತೋ ಎಂದೇ ಅರ್ಥ.
ಇದಕ್ಕೆ ಸಾಕ್ಷಿ ಅನ್ನುವಂತೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯ್ತು.
ಹಿಂದೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅವರಿಗೂ ಇದೇ ಗತಿ ಬಂದಿತ್ತು.
ಇನ್ನು ಹೆಲಿಕಾಫ್ಟರ್ ಮೂಲಕ ಬಂದು ತನ್ನ ಮನಿ ಪವರ್ ತೋರಿಸಿದ ಮಲ್ಯ ಕಥೆ ಏನಾಗಿದೆ ಅನ್ನುವುದು ಜಗತ್ತಿದೆ ಗೊತ್ತಿದೆ. ಅದರಲ್ಲೂ ಅವರ ಡೌನ್ ಫಾಲ್ ಶುರುವಾಗಿದ್ದು, ಸುಬ್ರಹ್ಮಣ್ಯ ಭೇಟಿಯ ನಂತರವಂತೆ.
ಮಲ್ಯ ಕುಕ್ಕೆಗೆ ಬಂದು ದೇವರಿಗೆ ಕೊಟ್ಟ ಕೊಡುಗೆಗಳನ್ನು ನೋಡಿದ್ರೆ, ದೇವರು ಅಶೀರ್ವಾದದ ಹೊಳೆ ಹರಿಸಬೇಕಿತ್ತು. ಆದರೆ ಕುಕ್ಕೆಯ ಗೋಪುರದ ಮೇಲೆ ಹೆಲಿಕಾಫ್ಟರ್ ಹಾರಿದ ಕಾರಣದಿಂದಲೇ ಮಲ್ಯನಿಗೆ ಬ್ಯಾಡ್ ಟೈಮ್ ಶುರುವಾಗಿತ್ತು ಅನ್ನುವುದು ಆಸ್ತಿಕರ ಮಾತು.
ಇದೀಗ ನಟ ಯಶ್ ಕೂಡಾ ಹೆಲಿಕಾಪ್ಟರ್ ನಲ್ಲೇ ದೇವಸ್ಥಾನ ಬಂದಿದ್ದಾರೆ. ಹೀಗಾಗಿಯೇ ಕರಾವಳಿ ಜನರ ಮುಂದೇನಾಗುತ್ತದೋ ಅನ್ನುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಯಶ್ ನಟನೆಯ ಕೆ.ಜಿ.ಎಫ್ ಚಿತ್ರದ ಮೇಲೆ ಇದರ ಪರಿಣಾಮ ಬೀಳುತ್ತಾ ಅನ್ನುವ ಪ್ರಶ್ನೆಯೂ ಮೂಡಲಾರಂಭಿಸಿದೆ.
ಆದರೆ ದೇವಸ್ಥಾನದ ಆಡಳಿತ ಮುಖ್ಯಸ್ಥರ ಪ್ರಕಾರ, ಯಶ್ ಹೆಲಿಕಾಫ್ಟರ್ ನಲ್ಲಿ ಕುಕ್ಕೆಗೆ ಬಂದಿರುವುದರಿಂದ ಯಾವುದೇ ತೊಂದರೆಗಳು ಇಲ್ವಂತೆ. ಯಶ್ ಅವರಿಗೆ ಇದರಿಂದ ಯಾವುದೇ ಅಪಾಯವೂ ಇಲ್ಲವಂತೆ.
ಯಾಕೆಂದರೆ ಈ ಹಿಂದೆ ಹೆಲಿಕಾಪ್ಟರ್ ಗಳು ದೇವಸ್ಥಾನಕ್ಕೆ ಸುತ್ತು ಹೊಡೆದು ಬಳಿಕ ಲ್ಯಾಂಡಿಂಗ್ ಆಗುತ್ತಿತ್ತು.
ಆದರೆ ಯಶ್ ಹೆಲಿಕಾಫ್ಟರ್ ದೇವಸ್ಥಾನಕ್ಕೆ ಸುತ್ತು ಬಂದಿಲ್ಲ. ಕುಮಾರಧಾರಾ ಬಳಿಯ ಹೆಲಿಪ್ಯಾಡ್ ನಲ್ಲಿ ಯಶ್ ಇದ್ದ ಹೆಲಿಕಾಫ್ಟರ್ ಲ್ಯಾಂಡಿಂಗ್ ಆಗಿರುವುದರಿಂದ ಯಶ್ ಸಮಸ್ಯೆಯಾಗಲು ಸಾಧ್ಯವಿಲ್ಲವಂತೆ.
Discussion about this post