ಪೋಲೆಂಡ್ : ಮಗುವಿನ ಹೃದಯ ಶಸ್ತ್ರ ಚಿಕಿತ್ಸೆ ಸಲುವಾಗಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಪೋಲೆಂಡ್ ನ ಜಾವೆಲಿನ್ ಥ್ರೋ ಪಟು ಮರಿಯಾ ಹರಾಜಿಗಿಟ್ಟಿದ್ದಾರೆ. ಈ ಮೂಲಕ ಅವರ ಮಾನವೀಯತೆ ಮೆರೆದಿದ್ದಾರೆ.
ಮಲೈಸ ಎಂಬ ಮಗುವಿಗೆ ತುರ್ತಾಗಿ ಹೃದಯ ಅಪರೇಷನ್ ಆಗಬೇಕಾಗಿತ್ತು. ಯುರೋಪಿನ ಬಹುತೇಕ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದ ಹಿನ್ನಲೆಯಲ್ಲಿ ಪೋಷಕರು ಅಮೆರಿಕಾ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಸುಮಾರು 3 ಕೋಟಿ ಬೇಕಾಗಿತ್ತು. ಈ ಮೊತ್ತದ ಹಣವನ್ನು ಪಾವತಿಸುವುದು ಪೋಷಕರಿಗೆ ಸಾಧ್ಯವಿರಲಿಲ್ಲ. ಹೀಗಾಗಿ ಪೋಷಕರು ಆನ್ ಲೈನ್ ನಲ್ಲಿ ನೆರವು ಕೋರಿದ್ದರು.
ಈ ವಿಷಯ ಮರಿಯಾ ಗಮನಕ್ಕೆ ಬಂತು. ತಕ್ಷಣ ತಾವು ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಗೆದ್ದ ಬೆಳ್ಳಿ ಪದಕವನ್ನು ಹರಾಜಿಗೆ ಇಟ್ಟರು. ಜಬ್ಬಾ ಪೋಲೆಂಡ್ ಅನ್ನುವ ಸಂಸ್ಥೆ 92 ಲಕ್ಷ ನೀಡಿ ಬೆಳ್ಳಿ ಪದಕವನ್ನು ಖರೀದಿಸಿತು. ಜೊತೆಗೆ ಪದಕವನ್ನು ಮರಿಯಾ ಅವರಿಗೆ ಹಿಂತಿರುಗಿಸಿರುವ ಸಂಸ್ಥೆ, 92 ಲಕ್ಷ ಹಣವನ್ನು ಮಗುವಿನ ಚಿಕಿತ್ಸೆಗೆ ನೀಡಿದೆ.
Discussion about this post