ಮಂಗಳೂರು : ಕರಾವಳಿಯ ಫೋಟೋಗ್ರಾಫರ್ ಗಳಿಗೆ ಕಳೆದ ಕೆಲವೊಂದು ವರ್ಷಗಳಿಂದ ಹೊಸ ಕ್ರೇಜ್ ಶುರುವಾಗಿದೆ. ಅದು ಸೆಲೆಬ್ರೆಟಿಗಳನ್ನು ದೇವಿಯರಂತೆ ಅಲಂಕಾರ ಮಾಡಿ ಫೋಟೋ ಕ್ಲಿಕ್ಕಿಸುವುದು. ಹಾಗಂತ ಇದೇನು ಸುಲಭದ ಕಾರ್ಯವಲ್ಲ, ಅಷ್ಟೇ ಚೆನ್ನಾಗಿ ಮೇಕಪ್ ಮಾಡಬಲ್ಲ ಮೇಕಪ್ ಆರ್ಟಿಸ್ಟ್ ಸಿಕ್ಕಿದ್ರೆ ಮಾತ್ರ ಹೀಗೆ ಫೋಟೋ ಗಳನ್ನು ಸೆರೆ ಹಿಡಿಯಲು ಸಾಧ್ಯ.
ಹಾಗಾದ್ರೆ ಹೀಗೆ ಫೋಟೋ ತೆಗೆಯುವ ಅಗತ್ಯವೇನು ಅಂದ್ರೆ, ಇದು ಪಕ್ಕಾ ಕೇರಳದ ಪ್ರಭಾವ, ಅಲ್ಲಿ ಹೀಗೆ ವಿಶೇಷ ಅನ್ನಿಸುವ ಪ್ರಯೋಗಗಳು ಸದಾ ನಡೆಯುತ್ತಿರುತ್ತದೆ. ಹೀಗಾಗಿ ಅದರ ಗಾಳಿ ಕರಾವಳಿಗೆ ಬರುತ್ತದೆ. ಜೊತೆಗೆ ಮಾರುಕಟ್ಟೆ ತಂತ್ರವು ಇದರಲ್ಲಿ ಅಡಗಿದೆ.
ಹೀಗೆ ಕರಾವಳಿಯ ಖ್ಯಾತ ಫೋಟೋ ಗ್ರಾಫರ್ ದಯಾ ಕುಕ್ಕಾಜೆ ಕೆಲ ಸೆಲೆಬ್ರೆಟಿಗಳನ್ನು ಒಟ್ಟುಗೂಡಿಸಿ ಅಷ್ಟ ಲಕ್ಷ್ಮಿಯರನ್ನು ಸೆರೆ ಹಿಡಿದಿದ್ದಾರೆ. ಈ ಸಿರಿಸ್ ನಲ್ಲಿ ರೂಪದರ್ಶಿಗಳಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ನಟಿ ಸಪ್ತ ಪಾವೂರು ಹಾಗೂ ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಕಾಣಿಸಿಕೊಂಡಿದ್ದಾರೆ.
ಶ್ರೀಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಈ ಫೋಟೋ ಶೂಟ್ ನಡೆದಿದ್ದು ನೋಡಲು ಎರಡು ಕಣ್ಣುಗಳು ಸಾಲದು ಅನ್ನುವಂತಿದೆ.
Discussion about this post