ಮುಂಬೈ : ನೀಲಿ ಚಿತ್ರ ನಿರ್ಮಾಣ ಆರೋಪದಲ್ಲಿ ಜೈಲು ಸೇರಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಬಂಧನದ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. ಈ ನಡುವೆ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಕುಂದ್ರಾ ನಿರಾಕರಿಸಿದ್ದು, ನಾನು ನೀಲಿ ಚಿತ್ರಗಳನ್ನು ತಯಾರಿಸಿಲ್ಲ. ನಾನು ನಿರ್ಮಿಸಿದ್ದು ಕೇವಲ ಕಾಮೋದ್ರೇಕ ಚಿತ್ರಗಳಷ್ಟೇ ಎಂದು ಹೇಳಿದ್ದರಂತೆ.
ಈ ನಡುವೆ 2008 ರಿಂದ ಸಿನಿಮಾ ರಂಗದಿಂದ ದೂರವುಳಿದಿರುವ ಶಮಿತಾ ಶೆಟ್ಟಿಗಾಗಿ ಸಿನಿಮಾವೊಂದನ್ನು ನಿರ್ಮಿಸಲು ರಾಜ್ ಕುಂದ್ರಾ ಯೋಜನೆ ರೂಪಿಸಿದ್ದರು ಅನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಮಾಡೆಲ್ ಗೆಹನಾ ವಸಿಷ್ಠಿ ಬಹಿರಂಗಪಡಿಸಿದ್ದು, ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರಾಜ್ ಕುಂದ್ರ ಬಂಧನಕ್ಕೂ ಮುನ್ನ ನಾನು ಅವರ ಕಚೇರಿಗೆ ಹೋಗಿದ್ದೆ. ಅವರು ಬಾಲಿ ಫೇಮ್ ಅನ್ನುವ ಹೊಸ APP ಲಾಂಚ್ ಮಾಡುವ ಸಿದ್ದತೆಯಲ್ಲಿದ್ದರು. ಈ APP ನಲ್ಲಿ ಸಿನಿಮಾ, ರಿಯಾಲಿಟಿ ಶೋ, ಮ್ಯೂಸಿಕ್ ವಿಡಿಯೋ ಪ್ರಸಾರ ಮಾಡುವುದು ಅವರ ಉದ್ದೇಶವಾಗಿತ್ತು. ಜೊತೆಗೆ ಶಮಿತಾ ಶೆಟ್ಟಿಗಾಗಿ ಸಿನಿಮಾ ತಯಾರಿಸಲು ಅವರು ಉದ್ದೇಶಿಸಿದ್ದರು ಅಂದಿದ್ದಾರೆ.
ಈ ನಡುವೆ ರಾಜ್ ಕುಂದ್ರಾ ಬಂಧನದ ಹಿಂದೆ ಮಹರಾಷ್ಟ್ರದ ರಾಜಕೀಯ ಶಕ್ತಿಯೊಂದು ಕೆಲಸ ಮಾಡಿದೆ ಅನ್ನುವ ಆರೋಪವೂ ಕೇಳಿ ಬಂದಿದೆ.
Discussion about this post