ದಕ್ಷಿಣ ಭಾರತದ ನಟಿ ಪ್ರಿಯಾಮಣಿ ಸಂಸಾರದಲ್ಲಿ ಸಣ್ಣದೊಂದು ಕಂಪನದ ಲಕ್ಷಣ ಗೋಚರಿಸುತ್ತಿದೆ. ಪ್ರಿಯಾಮಣಿ ಪತಿ ಮುಸ್ತಫಾ ಅವರ ಮದುವೆ ಬಗ್ಗೆ ಮೊದಲ ಪತ್ನಿ ಆಯೆಷಾ ತಗಾದೆ ತೆಗೆದಿದ್ದು, ಪ್ರಿಯಾಮಣಿ ಹಾಗೂ ಮುಸ್ತಫಾ ಮದುವೆ ಅಸಿಂಧು ಎಂದು ಬಾಂಬ್ ಸಿಡಿಸಿದ್ದಾರೆ. ನಾನೊಬ್ಬ ಅವಿವಾಹಿತ ಎಂದು ಹೇಳಿ ಮುಸ್ತಫಾ ಪ್ರಿಯಾಮಣಿರ ಅವರನ್ನು ಮದುವೆಯಾಗಿದ್ದಾರೆ ಅನ್ನುವುದು ಆಯೆಷಾ ಆರೋಪ.
ಆಯೆಷಾ ಅವರನ್ನು ಮದುವೆಯಾಗಿದ್ದ ಮುಸ್ತಫಾ 2013ರಲ್ಲಿ ಮೊದಲ ಪತ್ನಿಯಿಂದ ದೂರವಾಗಿದ್ದರು. ಆ ಹೊತ್ತಿನಲ್ಲಿ ಆಯೆಷಾ ಹಾಗೂ ಮುಸ್ತಫಾ ದಂಪತಿಗೆ ಇಬ್ಬರು ಮಕ್ಕಳಿದ್ದರು. ಇದಾದ ಬಳಿಕ 2017ರಲ್ಲಿ ಮುಸ್ತಫಾ ಪ್ರಿಯಾಮಣಿ ಅವರನ್ನು ವರಿಸಿದ್ದಾರೆ. ಈ ಮದುವೆಯ 5 ವರ್ಷಗಳ ಬಳಿಕ ಮಾತನಾಡಿರುವ ಆಯೆಷಾ ನಾವಿನ್ನೂ ಬೇರೆ ಬೇರೆಯಾಗಿಲ್ಲ. ನಾನು ಈಗ್ಲೂ ಅವರ ಪತ್ನಿ ಅಂದಿದ್ದಾರೆ. ಆದರೆ ಈ ಆರೋಪವನ್ನು ಮುಸ್ತಫಾ ರಾಜ್ ತಳ್ಳಿ ಹಾಕಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಮುಸ್ತಫಾ, ಮಕ್ಕಳನ್ನು ಬೆಳೆಸುವ ಸಲುವಾಗಿಯೇ ನಾನು ಆಯೆಷಾ ಅವರಿಗೆ ದುಡ್ಡು ಕೊಡುತ್ತಿದ್ದೇನೆ. ಇದೀಗ ಹೆಚ್ಚು ಹಣ ಪಡೆಯಲು ಇಂತಹ ಆರೋಪಗಳನ್ನು ಹೊರಿಸಲಾಗುತ್ತಿದೆ. ಒಂದು ವೇಳೆ ನನ್ನಿಂದ ಅನ್ಯಾಯವಾಗಿದ್ರೆ ಇಷ್ಟು ವರ್ಷಗಳ ಕಾಲ ಸುಮ್ಮನಿದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಸ್ತಫಾ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಆಯೆಷಾ, ಸಾತ್ವಿಕವಾದ ದಾರಿಯಲ್ಲಿ ಸರಿಮಾಡಲು ಸಾಕಷ್ಟು ಪ್ರಯತ್ನ ಪಟ್ಟೆ. ಎರಡು ಮಕ್ಳಳ ತಾಯಿಯಾಗಿ ಪಟ್ಟ ಕಷ್ಟ ನನಗೆ ಗೊತ್ತು. ಈಗ ಮುಸ್ತಫಾ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ ಕಠಿಣ ನಿರ್ಧಾರಗಳು ಅನಿವಾರ್ಯ ಅಂದಿದ್ದಾರೆ.
Discussion about this post