ಚೆನ್ನೈ: ಬಿಜೆಪಿ ನಾಯಕಿಯಾಗಿರುವ ನಟಿ ಖುಷ್ಬೂ ಸುಂದರ್ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಸೋಮವಾರ ಹ್ಯಾಕ್ ಮಾಡಲಾಗಿದೆ. ಅಂದ ಹಾಗೇ ಖುಷ್ಬೂ ಅವರ ಟ್ವಿಟರ್ ಖಾತೆ ಹ್ಯಾಕ್ ಆಗುತ್ತಿರುವುದು ಇದು ಎರಡನೇ ಸಲ. 2020ರ ಏಪ್ರಿಲ್ನಲ್ಲಿ ಖುಷ್ಬೂ ಅವರ ಟ್ವಿಟರ್ ಖಾತೆಯನ್ನು ಮೊದಲ ಸಲ ಹ್ಯಾಕ್ ಮಾಡಲಾಗಿತ್ತು.
ಈ ಬಾರಿ ಖುಷ್ಬೂ ಅವರು ಟ್ವಿಟರ್ ನಲ್ಲಿ ಮಾಡಿದ್ದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಲಾಗಿದೆ ಜೊತೆಗೆ ದುಷ್ಕರ್ಮಿಗಳು ಖುಷ್ಬೂ ಅವರ ಪ್ರೊಫೈಲ್ ಮತ್ತು ಖಾತೆಯ ಕವರ್ ಪೇಜ್ ಫೋಟೋಗಳನ್ನು ಬದಲಾಯಿಸಿದ್ದಾರೆ.
ಈ ಬಗ್ಗೆ ಮತ್ತೊಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಖುಷ್ಬೂ “ನಾನು ನನ್ನ ಟ್ವಿಟರ್ ಖಾತೆಯನ್ನು ಓಪನ್ ಮಾಡಲು ಮುಂದಾದಾಗ ನೀವು ಮೂರು ಬಾರಿ ತಪ್ಪು ಪಾಸ್ವರ್ಡ್ ನಮೂದಿಸಿರುವುದರಿಂದ ನಿಮ್ಮ ಖಾತೆ ಹ್ಯಾಕ್ ಆಗಿದೆ. 48 ಗಂಟೆಗಳ ಕಾಲ ನೀವು ನಿಮ್ಮ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಟ್ವಿಟರ್ ತಿಳಿಸಿದೆ ಅಂದಿದ್ದಾರೆ.
ಈ ಬಗ್ಗೆ ಖುಷ್ಬೂ ಅವರು ದೂರು ದಾಖಲಿಸಿದ್ದು, 48 ಗಂಟೆಗಳಲ್ಲಿ ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.
Discussion about this post