ನವದೆಹಲಿ : ಕೊರೋನಾ ವೈರಸ್ ಅನ್ನು ವಿಶ್ವಕ್ಕೆ ಹರಡಿದ ಚೈನಾ ಇನ್ನೂ ತನ್ನ ಕುತಂತ್ರ ಬುದ್ದಿಯನ್ನು ನಿಲ್ಲಿಸಿಲ್ಲ. ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ಇದೀಗ ಗಡಿಯಲ್ಲಿ ಸೇನಾ ಜಮಾವಣೆ ಪ್ರಾರಂಭಿಸಿದೆ.
ಗಡಿಯಲ್ಲಿ ಚೀನಾ ಸೇನೆಯನ್ನು ಜಮಾವಣೆ ಮಾಡಿಸುತ್ತಿರುವ ಹಿನ್ನಲೆಯಲ್ಲಿ ಭಾರತ ಇದೀಗ ಹೆಚ್ಚುವರಿಯಾಗಿ 50 ಸಾವಿರ ಯೋಧರನ್ನು ಗಡಿಗೆ ಕಳುಹಿಸಿಕೊಟ್ಟಿದೆ. ಹೀಗಾಗಿ ಇದೀಗ ಗಡಿಯಲ್ಲಿ ಭಾರತದ ಯೋಧರ ಸಂಖ್ಯೆ 2 ಲಕ್ಷವನ್ನು ದಾಟಿದೆ. ಗಡಿಯಲ್ಲಿ ಈ ಪ್ರಮಾಣದಲ್ಲಿ ಸೇನಾ ಜಮಾವಣೆ ಇದೇ ಮೊದಲ ಬಾರಿಗೆ ಆಗಿದ್ದು, ಸಹಜವಾಗಿಯೇ ಆತಂಕದ ಪರಿಸ್ಥಿತಿ ನೆಲೆಸಿದೆ.
ಕಳೆದ ಬಾರಿ ಗಲ್ವಾನ್ ಘಟನೆಯಿಂದ ಪಾಠ ಕಲಿತಿರುವ ಭಾರತ ಈ ಬಾರಿ ಚೀನಾ ಸೈನಿಕರು ಮುನ್ನುಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಇದರೊಂದಿಗೆ ಚೀನಾ ಗಡಿಗೆ ಹೊಂದಿಕೊಂಡಂತಿರುವ ಮೂರು ಪ್ರದೇಶಗಳಲ್ಲಿ ಭಾರತದ ಜೆಟ್ ವಿಮಾನಗಳನ್ನು ಕೂಡಾ ನಿಯೋಜಿಸಲಾಗಿದೆ. ಜೊತೆಗೆ ಲಘು ಹೆಲಿಕಾಫ್ಟರ್, ಎಂ7777 ಹೊವಿಟ್ಜರ್ ಫಿರಂಗಿಗಳನ್ನು ಕೂಡಾ ಭಾರತೀಯ ಸೇನೆ ಚೀನಾ ಗಡಿಯಲ್ಲಿ ನಿಯೋಜಿಸಿದೆ.
ಒಂದು ವೇಳೆ ಚೀನಾ ಈ ಬಾರಿ ಬಲಪ್ರಯೋಗಕ್ಕೆ ಮುಂದಾದ್ರೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಲು ಭಾರತದ ಯೋಧರು ಸನ್ನದ್ಧರಾಗಿದ್ದಾರೆ.
Discussion about this post