ಡ್ರಗ್ಸ್ ಮಾಫಿಯಾದ ವಿರುದ್ಧ ಸಾರಿರುವ ಕರ್ನಾಟಕ ಪೊಲೀಸರು ಈಗಾಗಲೇ ಹಲವಾರು ಕಿಂಗ್ ಪಿನ್ ಗಳನ್ನು ಜೈಲಿಗಟ್ಟಿದ್ದಾರೆ. ಇದರಲ್ಲಿ ಚಂದನವನದ ಮಂದಿಯೂ ಸೇರಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ಹೆಸರಗಳು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದಿತ್ತು.
ಇದೀಗ ಬೆಂಗಳೂರು ಪೊಲೀಸರ ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಆನೆ ಬಲ ಬಂದಿದ್ದು, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಮಾದಕ ವಸ್ತುಗಳು ಸಮಾಜಕ್ಕೆ ಕಂಟಕ, ಇದಕ್ಕೆ ಯಾರು ಬೇಕಾದರೂ ಬಲಿಯಾಗಬಹುದು, ಬಲಿಯಾಗಬಾರದು ಅನ್ನುವುದಾದರೆ ಪೊಲೀಸರ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
Discussion about this post