ಆಯುಷ್ಯ ಗಟ್ಟಿ ಇದ್ರೆ ಎಂಥಾ ಸಂದರ್ಭದಲ್ಲೂ ಬದುಕಿ ಬರಬಹುದು ಅನ್ನುವುದು ಹಲವು ಸಲ ಸಾಬೀತಾಗಿದೆ.
ಹೀಗೆ ಹಣೆ ಬರಹ ಗಟ್ಟಿ ಇದ್ದ ಪುಣ್ಯಾತ್ಮನೊಬ್ಬ ತಿಮಿಂಗಿಲದ ಹೊಟ್ಟೆ ಸೇರಿ ಪಾರಾಗಿ ಬಂದಿದ್ದಾನೆ. ಸುಮಾರು 40 ಸೆಕೆಂಡ್ ಗಳ ಕಾಲ ತಿಮಿಂಗಿಲದ ಹೊಟ್ಟೆಯಲ್ಲಿದ್ದ ವ್ಯಕ್ತಿ ಇದೀಗ ಆಸ್ಪತ್ರೆ ಸೇರಿದ್ದು, ಮೂಳೆ ಮಾಂಸಗಳಿಗೆ ಹಾನಿಯಾಗದಿರುವುದು ಅಚ್ಚರಿಗೆ ಕಾರಣವಿದೆ.
ಅಮೆರಿಕಾದ ಮೆಸಾಚುಸೆಟ್ಸ್ ನ ಕೇಪ್ ಕೊಡ್ ನಲ್ಲಿ ಈ ಘಟನೆ ನಡೆದಿದ್ದು,56 ವರ್ಷದ ಮೈರೆಲ್ ಪಕಾರ್ಡ್ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಹಂಪ್ ಬ್ಯಾಕ್ ತಿಮಿಂಗಿಲ ಅವರನ್ನು ನುಂಗಿದೆ. ಖುಷಿ ಖುಷಿಯಾಗಿ ಈಜುತ್ತಿದ್ದವರಿಗೆ ತಿಮಿಂಗಿಲದ ಬಾಯಿಯೊಳಗೆ ಹೋಗುತ್ತಿರುವುದು ಅರಿವಾಗಿದೆ.
ಇನ್ನೇನು ಸಾವಿನ ಮನೆಯ ಬಾಗಿಲು ತಟ್ಟಿದ್ದೇನೆ ಅನ್ನುವುದು ಅರಿವಾಗುತ್ತಿದ್ದಂತೆ ಮನೆಯಲ್ಲಿರುವ 12 ಹಾಗೂ 15 ವರ್ಷದ ಇಬ್ಬರು ಮಕ್ಕಳ ನೆನಪಾಗಿದೆ. ಆದರೆ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಒಳಗಡೆ ಗಾಢಾಂಧಕಾರ ಬೇರೆ. ಹೀಗಾಗಿ ಬದುಕಿ ಮುಗಿದು ಎಂದು ಅಂದುಕೊಂಡಿದ್ದಾರೆ.
ಮೈರೆಲ್ ಪಕಾರ್ಡ್ ತಿಮಿಂಗಿಲದ ಹೊಟ್ಟೆ ಸೇರುತ್ತಿದ್ದಂತೆ ಒದ್ದಾಡಲು ಪ್ರಾರಂಭಿಸಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ. ಏಕಾಏಕಿ ಕೊಸರಿದ ತಿಮಿಂಗಿಲ, ಆಳ ಸಮುದ್ರದಿಂದ ಮೇಲೆ ಬಂದು ಉಗುಳಿ ಹೋಗಿದೆ. ಇದನ್ನು ಅವರ ಜೊತೆಗಿದ್ದ ಗೆಳೆಯರು ಗಮನಿಸಿದ್ದಾರೆ. ತಕ್ಷಣ ಪಕಾರ್ಡ್ ರನ್ನು ರಕ್ಷಿಸಿದ್ದಾರೆ. ಬಳಿಕೆ ಆಸ್ಪತ್ರೆಗೆ ಬಂದಿದ್ದಾರೆ. ಅದ್ಯಾವ ಮೂಳೆಗಳು ಮುರಿದು ಹೋಗಿದೆಯೋ ಅನ್ನುವ ಆತಂಕ ಅವರದ್ದಾಗಿತ್ತು. ಅಚ್ಚರಿ ಅಂದ್ರೆ ಒಂದೇ ಒಂದು ಮೂಳೆಗೆ ಗಾಯವಾಗಿರಲಿಲ್ಲ.
Discussion about this post