ಚೈನೈ : ತಮಿಳುನಾಡಿನ ಮೂಡುಮಲೈ ಆನೆ ಶಿಬಿರದ 28 ಆನೆಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ವಾರದ ಹಿಂದಷ್ಟೇ ತಮಿಳುನಾಡಿನ ಮಧುಮಲೈ ಆನೆ ಕ್ಯಾಂಪಿನ ಇಬ್ಬರು ಸಿಬ್ಬಂದಿಗೆ ಕೋವಿಡ್ ದೃಢವಾದ ಹಿನ್ನೆಲೆಯಲ್ಲಿ 2 ಮರಿಯಾನೆ ಸೇರಿದಂತೆ 28 ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಕಳೆದ ಗುರುವಾರ ಚೆನೈನ ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನವನದ ಸಿಂಹಿಣಿಯೊಂದು ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿತ್ತು. ಈ ಬಳಿಕ ಇತರೆ ಪ್ರಾಣಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ 11 ಪ್ರಾಣಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಇದಾದ ಬಳಿಕ ಎಲ್ಲಾ ಮೃಗಾಲಯಗಳ ಸಿಬ್ಬಂದಿ ಮತ್ತು ಮೃಗಾಲಯಗಳ ಪ್ರಾಣಿಗಳನ್ನು ಕೊರೋನಾ ಪರೀಕ್ಷೆಗೆ ಒಡ್ಡಲು ಆದೇಶಿಸಿದ್ದರು. ಜೊತೆಗೆ ಅಗತ್ಯ ಮುಂಜಾಗ್ರತ ಕ್ರಮಗಳಿಗೆ ಸೂಚಿಸಿದ್ದರು.
ಅದರಂತೆ ಮೂಡುಮಲೈ ಆನೆ ಶಿಬಿರದ 28 ಆನೆಗಳ ಸೊಂಡಿಲು ಮತ್ತು ಬಾಯಿಯಿಂದ ಮಾದರಿ ಸಂಗ್ರಹಿಸಿ ಉತ್ತರ ಪ್ರದೇಶದ ಲ್ಯಾಬ್ಗೆ ಗಂಟಲು ದ್ರವ ಮಾದರಿಗಳನ್ನು ಕಳುಹಿಸಲಾಗಿತ್ತು.
ಇನ್ನು ಮುಂಜಾಗ್ರತ ಕ್ರಮವಾಗಿ ಆನೆ ಶಿಬಿರದ 52 ಮಾವುತರು ಹಾಗೂ 27 ಕಾವಾಡಿಗಳಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಜೊತೆಗೆ ಮಾವುತರ ಮತ್ತು ಕಾವಾಡಿಗಳ ದೇಹದ ಉಷ್ಣತೆ ಪರೀಕ್ಷೆ ನಡೆಸಿದ ಬಳಿಕವೇ ಆನೆಗಳಿಗೆ ಆಹಾರ ನೀಡುವಂತೆ ಸೂಚಿಸಲಾಗಿದೆ
ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕರ್ನಾಟಕಕ್ಕೂ ಆತಂಕ ಎದುರಾಗಿದೆ. ಆದರೆ ಕರ್ನಾಟಕದ ಮೃಗಾಲಯ, ಆನೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅದ್ಯಾವ ಕ್ರಮ ಕೈಗೊಳ್ಳಲಾಗಿದೆ ಗೊತ್ತಿಲ್ಲ. ಕರ್ನಾಟಕದಲ್ಲೂ ಆನೆಗಳ ಕೊರೋನಾ ಪರೀಕ್ಷೆ ನಡೆಸುವ ಬಗ್ಗೆಯೂ ಇನ್ನೂ ಯಾವುದೇ ತೀರ್ಮಾನವಾಗಿಲ್ಲ.
Discussion about this post