ಒಂದೇ ಒಂದು ಕಣ್ಸನೆಯಿಂದ ರಾತ್ರೋರಾತ್ರಿ ಇಂಟರ್ ನೆಟ್ ಕ್ರಶ್ ಆದ ಪ್ರಿಯಾ ವಾರಿಯರ್ ಅಗೊಮ್ಮೆ ಈಗೊಮ್ಮೆ ಸುದ್ದಿ ಮಾಡುತ್ತಿರುತ್ತಾರೆ. ಇದೀಗ ಮತ್ತೆ ಸುದ್ದಿಯಲ್ಲಿರುವ ಪ್ರಿಯಾ ವಾರಿಯರ್, ಈ ಬಾರಿ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿ ಪಡ್ಡೆ ಹುಡುಗರ ನೆಮ್ಮದಿ ಕೆಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಕ್ರಿಯವಾಗಿರುವ ಪ್ರಿಯಾ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಎದೆ ಸೀಳುವಂತ ಡ್ರೆಸ್ ತೊಟ್ಟ ಫೋಟೋ ಹಂಚಿಕೊಂಡಿದ್ದರು.
ಈ ಫೋಟೋ ನೋಡಿದ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಕೆಲವರು ಅಸಭ್ಯ ಕಮೆಂಟ್ ಗಳನ್ನೂ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾ, ನಿಮ್ಮ ಎಲ್ಲ ಕಾಮೆಂಟ್ಗಳನ್ನು ನಾನು ಓದಿದ್ದೇನೆ. ಕೆಟ್ಟ ಕೆಟ್ಟದಾಗಿ ಕಮೆಂಟ್ ಮಾಡಿದವರೆಲ್ಲರಿಗೂ ಚಪ್ಪಾಳೆ. ಏರಿಳಿತವನ್ನು ದಾಟಿಕೊಂಡು ನಾನು ಇಲ್ಲಿಯವರೆಗೆ ಬಂದಿದ್ದೇನೆ. ಈ ರೀತಿ ಬೆದರಿಕೆ ಹಾಕುವವರನ್ನು ನಾನು ನಿತ್ಯ ನೋಡುತ್ತೇನೆ. ಅದರಿಂದ ಏನೂ ಸಾಧ್ಯವಿಲ್ಲ. ಮೊದಲು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದರು.
ಒರು ಆಡಾರ್ ಲವ್ ಸಿನಿಮಾದಲ್ಲಿ ಕಣ್ಸನ್ನೆ ಮಾಡುವ ಮೂಲಕ ಒಂದೇ ರಾತ್ರಿಯಲ್ಲಿ ನ್ಯಾಶನಲ್ ಕ್ರಷ್ ಆದ ಪ್ರಿಯಾ ವಾರಿಯರ್ ನಾಯಕಿಯಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿಯೇ ಇಲ್ಲ.
ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೊಂದು ಬ್ರೇಕ್ ಸಿಗಲೇ ಇಲ್ಲ. ಕನ್ನಡಲ್ಲೂ ವಿಷ್ಣುಪ್ರಿಯ ಅನ್ನೋ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ.
Discussion about this post