ಕೊರೋನಾ ಕಾರಣದಿಂದ ಅರ್ಧಕ್ಕೆ ಬಿಗ್ ಬಾಸ್ ಕಾರ್ಯ ನಿಂತಿದ್ದು ವೀಕ್ಷಕರು ಹಾಗೂ ಸ್ಪರ್ಧಿಗಳಿಗೆ ಬೇಸರ ಮೂಡಿಸಿದೆ.
ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ಸ್ಪರ್ಧಿಗಳದ್ದು ವಿಚಿತ್ರ ನಡವಳಿಕೆ ಅಂದ್ರೆ ತಪ್ಪಾಗಲಾರದು. ಹಿಂದಿನ ಸೀಸನ್ ನ ಸ್ಪರ್ಧಿಗಳ ನಡುವೆ ಯಾವುದೇ ಗುಂಪುಗಾರಿಕೆ ಇರಲಿಲ್ಲ. ಕಾರ್ಯ ಮುಗಿಸಿದ ಸ್ಪರ್ಧಿಗಳು ಒಂದೆಡೆ ಸೇರಿ ನಡೆಸಿದ ಪಾರ್ಟಿಗಳಿಗೆ ಲೆಕ್ಕವಿಲ್ಲ. ಆ ಪೈಕಿ ಒಂದರೆಡು ಮಂದಿ ಮಾತ್ರ ಪಾರ್ಟಿಗಳಿಂದ ದೂರವುಳಿದಿದ್ದರು.
ಆದರೆ ಈ ಬಾರಿ ಪ್ರಶಾಂತ್ ಸಂಬರಗಿ ಬಿತ್ತಿದ ಗುಂಪುಗಾರಿಕೆ ಅನ್ನುವ ಬೀಜ ಮೊಳೆಕೆಯೊಡೆದು ಗಿಡವಾಗಿ ಮರವಾಗಿದೆ. ಮನೆಯಿಂದ ಹೊರ ಬಂದ ಮೇಲೂ ಕೂಡಾ ಎರಡ್ಮೂರು ವಾಟ್ಸಾಪ್ ಗ್ರೂಫ್ ಗಳು ರಚನೆಯಾಗಿದ್ದು, ಗ್ರೂಫ್ ನಿಂದ ಹೊರಗೆ ಉಳಿದಿರುವ ಸದಸ್ಯರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಂತೆ.
ಇದಕ್ಕೆ ಸಾಕ್ಷಿ ಅನ್ನುವಂತೆ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ಪ್ರಶಾಂತ್ ಸಂಬರಗಿ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಪ್ರಿಯಾಂಕ ತಿಮ್ಮೇಶ್ ಹಾಗೂ ಚಂದ್ರಚೂಡ್ ಕೂಡಾ ಹಸಿರು ನಿಶಾನೆ ತೋರಿದ್ದರು.
ಈಗ್ಲೂ ಕೂಡಾ ಪ್ರಿಯಾಂಕ ತಿಮ್ಮೇಶ್ ಹಾಗೂ ಚಂದ್ರಚೂಡ್ ನಡುವೆ ಸಂಬಂಧ ಚೆನ್ನಾಗಿದೆ. ಮಹಾಮನೆಯಲ್ಲಿದ್ದಷ್ಟು ದಿನ ಮುನಿಸಿಕೊಂಡಿದ್ದವರು ಇದೀಗ ಆತ್ಮೀಯರಾಗಿದ್ದಾರೆ.
ಇನ್ನು ಮಹಾಮನೆಯಿಂದ ಹೊರಗೆ ಬಂದ ಬಳಿಕದ ದಿನಗಳ ಬಗ್ಗೆ ಮಾತನಾಡಿರುವ ಪ್ರಿಯಾಂಕ ತಿಮ್ಮೇಶ್, ಬಿಗ್ ಬಾಸ್ ಮನೆಯಲ್ಲಿ ಡಯೆಟ್ ಮಿಸ್ಸಾಗಿತ್ತು, ಹೀಗಾಗಿ ಸಿಕ್ಕಾಪಟ್ಟೆ ತೂಕ ಏರಿತ್ತು. ಕಳೆದ ವರ್ಷವಷ್ಟೇ ಡಯೆಟ್ ವರ್ಕೌಟ್ ಮಾಡಿ 15 ಕೆಜಿ ಇಳಿಸಿದ್ದೆ, ಇದೀಗ ಬಿಗ್ ಬಾಸ್ ಮನೆಯಿಂದ ಬಂದ ಬಳಿಕ 3 ಕೆಜಿ ಇಳಿಸಿರುವುದಾಗಿ ಹೇಳಿದ್ದಾರೆ. ಇನ್ನು ಚಂದ್ರಚೂಡ್ ಜೊತೆಗಿನ ಸಂಬಂಧ ಬಗ್ಗೆ ಮಾತನಾಡಿರುವ ಪ್ರಿಯಾಂಕ, ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಚಂದ್ರಚೂಡ್ ಜೊತೆಗೆ ಮುನಿಸಿತ್ತು. ಮನೆಯಿಂದ ಹೊರ ಬಂದ ಮೇಲೆ ಅದೇನಿಲ್ಲ. ಚಂದ್ರಚೂಡ್ ಅವರೇ ಫೋನ್ ಮಾಡಿ ನನಗೆ ಕೊರೋನಾ ಲಸಿಕೆ ಕೊಡಿಸಿದರು. ಈ ಭೇಟಿ ಸಂದರ್ಭದಲ್ಲಿ ಕೋಪ, ಶೀತಲ ಸಮರ ಏನೂ ಇರಲಿಲ್ಲ ಅಂದಿದ್ದಾರೆ.
Discussion about this post