ಮುಂಬೈ : ಕೊರೋನಾ ಕಾರಣದಿಂದ ರಿಯಲ್ ಎಸ್ಟೇಟ್ ವ್ಯವಹಾರ ನೆಲಕಚ್ಚಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಈ ಕಾರಣದಿಂದ ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಕಟ್ಟಿ ಕಾಸು ಮಾಡೋ ಉತ್ಸಾಹದಲ್ಲಿದ್ದ ಸಂಸ್ಥೆಗಳಿಗೆ ನಿರಾಶೆಯಾಗಿದೆ. ಹೀಗಾಗಿ ಕಟ್ಟಿರೋ ಅಪಾರ್ಟ್ ಮೆಂಟ್ ಗಳು ಸೇಲ್ ಅಂದ್ರೆ ಸಾಕು, ಹಾಕಿರೋ ಬಂದಿರೋ ಬಂಡವಾಳ ಬಂದ್ರೆ ಅದೃಷ್ಟ ಎಂದು ಆಫರ್ ಗಳ ಮೂಲ ಫ್ಲ್ಯಾಟ್ ಸೇಲ್ ನಡೆಯುತ್ತಿದೆ.
ಇನ್ನು ಕೆಲ ರಾಜ್ಯಗಳು ರಿಯಲ್ ಎಸ್ಟೇಟ್ ಉದ್ಯಮದ ರಕ್ಷಣೆಗೆ ದೌಡಾಯಿಸಿದ್ದು, ನೋಂದಣಿ ಮತ್ತು ಮುಂದ್ರಾಕ ಶುಲ್ಕವನ್ನು ಕಡಿತಗೊಳಿಸಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಸೆಲೆಬ್ರೆಟಿಗಳು ಉದ್ಯಮಿಗಳು ಬೆಲೆ ಇಳಿಕೆ ಸಂದರ್ಭದಲ್ಲಿ ವಿಲಾಸಿ ಅಪಾರ್ಟ್ ಮೆಂಟ್ ಗಳ ಖರೀದಿಗೆ ಮುಂದಾಗಿದ್ದಾರೆ. ಹೀಗೆ ನಟ ಅಮಿತಾಭ್ ಬಟ್ಟನ್ ಕೂಡಾ 31 ಕೋಟಿ ಮೌಲ್ಯದ ಪ್ಲ್ಯಾಟ್ ಒಂದನ್ನು ಖರೀದಿಸಿದ್ದಾರೆ.
ಕ್ರಿಸ್ಟಲ್ ಗ್ರೂಪ್ ನ ಅಟ್ಲಾಂಟಿಸ್ ಪ್ರಾಜೆಕ್ಟ್ ನಲ್ಲಿ ಬಚ್ಚನ್ ಈ ಆಸ್ತಿಯನ್ನು ಖರೀದಿಸಿದ್ದು, 2021ರ ಎಪ್ರಿಲ್ ತಿಂಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆರು ಕಾರು ಗಳನ್ನು ಪಾರ್ಕ್ ಮಾಡೋ ಜಾಗ ವಿದ್ದು 27 ಮತ್ತು 28ನೇ ಅಂತಸ್ತಿನಲ್ಲಿ ಈ ಆಸ್ತಿ ಇದೆ.
ಇನ್ನು ಇದೇ ಅಪಾರ್ಟ್ ಮೆಂಟ್ ನಲ್ಲಿ ಸನ್ನಿ ಲಿಯೋನ್ 2021ರ ಮಾರ್ಚ್ 28 ರಂದು ಪ್ಲ್ಯಾಟ್ ಖರೀದಿಸಿದ್ದಾರೆ. 16 ಕೋಟಿ ಮೌಲ್ಯದ ಪ್ಲ್ಯಾಟ್ ಅನ್ನು ಸನ್ನಿ ಖರೀದಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇನ್ನು ಇದೇ ಅಪಾರ್ಟ್ ಮೆಂಟ್ ನಲ್ಲಿ ಬಾಲಿವುಡ್ ನಿರ್ಮಾಪಕ ಆನಂದ್ ಎಲ್ ರಾಯ್ ಕೂಡಾ ಪ್ಲ್ಯಾಟ್ ಖರೀದಿಸಿದ್ದಾರೆ.
Discussion about this post