ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇಂತಹುದೊಂದು ಸಮಸ್ಯೆಯನ್ನು ತಂಡ ಎದುರಿಸಿರಲಿಲ್ಲ. ಅಷ್ಟು ಮಾತ್ರವಲ್ಲದೆ ಇಂತಹುದೊಂದು ಸಮಸ್ಯೆ ಬರಬಹುದು ಅನ್ನುವ ಕಲ್ಪನೆಯೂ ಬಿಗ್ ಬಾಸ್ ತಂಡಕ್ಕೆ ಇರಲಿಲ್ಲ.
ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಂತಹ ಸಮಸ್ಯೆ ಹಲವಾರು ಸಾರಿ ಬಂದಿತ್ತು. ಹಾಗೂ ಅದಕ್ಕೊಂದು ಪರ್ಯಾಯವನ್ನು ಕೂಡಾ ತಂಡ ಮಾಡಿಕೊಂಡಿತ್ತು.
ಹೌದು ನಟ ಕಿಚ್ಚ ಸುದೀಪ್ ಈ ಬಾರಿಯ ಶೋನಲ್ಲಿ ಎರಡು ಎಪಿಸೋಡ್ಗಳನ್ನು ಅವರು ನಡೆಸಿಕೊಡೋದಿಲ್ಲ. ಸುದೀಪ್ ಅವರು ಜ್ವರದಿಂದ ಬಳಲುತ್ತಿರುವ ಕಾರಣ ಅವರು ಈ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ.
ಹಾಗಾದ್ರೆ ಕಿಚ್ಚನ ಬದಲಾಗಿ ಬೇರೆಯವನ್ನು ಎರಡು ದಿನದ ಮಟ್ಟಿಗೆ ನಿರೂಪಕರಾಗಿ ತಂದರೆ ಹೇಗೆ ಅನ್ನುವ ಕುರಿತಂತೆ ಬಿಗ್ ಬಾಸ್ ತಂಡ ಚರ್ಚೆ ನಡೆಸಿದೆ. ಸುದೀಪ್ ಅವರಿಗೆ ಪರ್ಯಾಯವಾಗಿರುವವರನ್ನು ತಂದು ಕೂರಿಸಿದ್ರೆ ಮುಂದಿನ ವಾರಗಳಲ್ಲಿ ಸಮಸ್ಯೆಯಾಗಬಹುದು. ಬೇರೆಯವರನ್ನು ಆಯ್ಕೆ ಮಾಡೋಣ ಅಂದ್ರೆ ಐಪಿಎಲ್ ಜ್ವರ ಬೇರೆ ಈ ಸಂದರ್ಭದಲ್ಲಿ ಟಿ.ಆರ್.ಪಿ ಎಗರಿ ಹೋದ್ರೆ ಅನ್ನುವ ಭಯ ಬಿಗ್ ಬಾಸ್ ತಂಡದ್ದು. ಹೀಗಾಗಿ ಯಾವುದೇ ನಿರೂಪಕರಿಲ್ಲದೆ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಇನ್ನು ಸುದೀಪ್ ಬಂದಿಲ್ಲ ಅಂದ್ರೆ ಈ ವಾರ ಎಲಿಮಿನೇಷನ್ ನಡೆಯುವುದಾದರೂ ಹೇಗೆ ಅನ್ನುವ ಪ್ರಶ್ನೆ ವೀಕ್ಷಕರದ್ದು. ಹೀಗಾಗಿ ಅದಕ್ಕೂ ವ್ಯವಸ್ಥೆ ಮಾಡಿಕೊಂಡಿರುವ ಬಿಗ್ ಬಾಸ್ ತಂಡ, ಸುದೀಪ್ ಬಾರದಿದ್ದರೂ ಎಲಿಮಿನೇಷನ್ ನಡೆಯಲಿದೆ ಅಂದಿದೆ.
ಇನ್ನು ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಲರ್ಸ್ ಚಾನೆಲ್ ಹೆಡ್ ಪರಮೇಶ್ವರ್ ಗುಂಡ್ಕಲ್, ಇಷ್ಟು ಸೀಸನ್ನುಗಳಲ್ಲಿ ಇಂಥ ಸಂದರ್ಭ ಎದುರಾಗುತ್ತಿರುವುದು ಇದೇ ಮೊದಲು. ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ. ಆದರೆ ನಾಳೆ ಮತ್ತು ರವಿವಾರ ಬಿಗ್ ಬಾಸ್ ಎಪಿಸೋಡುಗಳು ರಾತ್ರಿ ಒಂಬತ್ತು ಗಂಟೆಗೆ ಎಂದಿನಂತೆ ಪ್ರಸಾರ ಆಗಲಿವೆ. ಜೊತೆಯಲ್ಲಿ ಈ ವಾರ ಅತಿಕಡಿಮೆ ಮತಗಳನ್ನು ಪಡೆದ ಒಬ್ಬರು ಕಂಟೆಸ್ಟೆಂಟ್ ಮನೆಯಿಂದ ಹೊರಹೋಗಲಿದ್ದಾರೆ. ಈ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಹೇಗೆಲ್ಲಾ ಮಾಡಬಹುದು ಎಂಬ ಆಯ್ಕೆಗಳನ್ನು ಎದುರಿಗೆ ಇಟ್ಟುಕೊಂಡು ಬಿಗ್ ಬಾಸ್ ತಂಡ ಕೆಲಸ ಮಾಡುತ್ತಿದೆ. ನಿಮ್ಮ ಕುತೂಹಲಕ್ಕೆ, ಪ್ರೀತಿಗೆ ಮತ್ತು ಶುಭಹಾರೈಕೆಗಳಿಗೆ ಧನ್ಯವಾದಗಳು ಅಂದಿದ್ದಾರೆ.
Discussion about this post