ಮುಂಬೈ : ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಭಾರತ ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟಿರುವ ಚೀನಾ ಮೂಲದ ಬೈಟ್ ಡ್ಯಾನ್ಸ್
ಸಂಸ್ಥೆಗೆ ಸಂಕಷ್ಟ ತಪ್ಪಿಲ್ಲ. ಈಗಾಗಲೇ ಬೈಟ್ ಡ್ಯಾನ್ಸ್ ಸಂಸ್ಥೆಯ ಟಿಕ್ ಟಾಕ್, ಹಲೋ ಸೇರಿದಂತೆ ಹಲವು APPಗಳು ಶಾಶ್ವತವಾಗಿ ನಿಷೇಧಿಸಲ್ಪಟ್ಟಿದೆ. ಇದೀಗ ಇದೇ ಸಂಸ್ಥೆಯ ಮೇಲೆ ತೆರಿಗೆ ವಂಚನೆಯ ಆರೋಪ ಕೇಳಿ ಬಂದಿದೆ.
ಈ ಸಂಬಂಧ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ 7.90 ಕೋಟಿ ಠೇವಣಿ ಇರಿಸುವಂತೆ ಬೈಟ್ ಡ್ಯಾನ್ಸ್ ಸಂಸ್ಥೆಗೆ ಸೂಚಿಸಿದೆ, ಸಂಸ್ಥೆಯ ಕೆಲ ಹಣಕಾಸು ವ್ಯವಹಾರಗಳ ಕುರಿತಂತೆ ಈಗಾಗಲೇ ತನಿಖೆ ನಡೆಸಲಾಗಿದ್ದು, ತನಿಖೆ ಆಧಾರದಲ್ಲಿ ಬೈಟ್ ಡ್ಯಾನ್ಸ್ ಇಂಡಿಯಾದ ಖಾತೆಯನ್ನು ಸ್ಥಗಿತಗೊಳಿಸುವಂತೆ HSBC ಹಾಗೂ ಸಿಟಿ ಬ್ಯಾಂಕ್ ಗೆ ಗುಪ್ತಚರ ಸಂಸ್ಥೆ ಸೂಚಿಸಿತ್ತು.
ಇದನ್ನು ಪ್ರಶ್ನಿಸಿದ್ದ ಬೈಟ್ ಡ್ಯಾನ್ಸ್ ಇಂಡಿಯಾ, ಸರ್ಕಾರದ ತೆರಿಗೆ ಬೇಡಿಕೆಗೆ ನಾನು ಬದ್ಧನಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಅಂದಾಜು 11 ಮಿಲಿಯನ್ ಡಾಲರ್ ಹಣವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನಲ್ಲಿ ಠೇವಣಿಯಾಗಿರುಸುವಂತೆ ಸೂಚಿಸಿದೆ.
Discussion about this post