ಕೆಲವರಿಗೆ ಸಾಮಾಜಿಕ ಜಾಲತಾಣದಲ್ಲಿ ಏನು ಕೇಳಬಾರದು, ಏನು ಕೇಳಬೇಕು ಅನ್ನುವುದು ಗೊತ್ತಿರೋದಿಲ್ಲ. ಹುಡುಗಿಯರ ಜೊತೆಗೆ ಹೇಗೆ ವರ್ತಿಸಬೇಕು ಅನ್ನುವ ಕನಿಷ್ಟ ಬುದ್ದಿಯೂ ಇರೋದಿಲ್ಲ. ಹೀಗೆ ನಟಿಯೊಬ್ಬರ ಜೊತೆಗೆ ಅಸಭ್ಯವಾಗಿ ವರ್ತಿಸಿದವನೊಬ್ಬನಿಗೆ ಸರಿಯಾದ ಮಂಗಳಾರತಿಯಾಗಿದೆ.
ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಗಾಸಿಪ್ ವಿವಾದಗಳಿಂದ ದೂರ. ಹಾಗಂತ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಮುದ್ದಾದ ಫೋಟೋಗಳನ್ನು ಸದಾ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅದಕ್ಕೆ ಬರೋ ಕಮೆಂಟ್ ಗಳನ್ನು ತಾಳ್ಮೆಯಿಂದ ಓದುವುದು ಪ್ರಿಯಾಮಣಿಯವರ ವಿಶೇಷ ಗುಣ.
ಇತ್ತೀಚೆಗೆ ಫೋಟೋ ಒಂದಕ್ಕೆ ಒಳ್ಳೆಯ ಕಮೆಂಟ್ ಗಳು ಸಾವಿರ ಬಂದಿತ್ತು. ಆ ಪೈಕಿ ವಿಕೃತ ವ್ಯಕ್ತಿಯಬ್ಬ ಬೆತ್ತಲೆ ಫೋಟೋ ಅಪ್ ಲೋಡ್ ಮಾಡಿ ಎಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕೆಂಡಾಮಂಡಲವಾರದ ಪ್ರಿಯಾಮಣಿ, ಮೊದಲು ನಿಮ್ಮ ತಾಯಿ ತಂಗಿಯ ಬೆತ್ತಲೆ ಫೋಟೋ ಅಪ್ ಲೋಡ್ ಮಾಡು, ಆಮೇಲೆ ನಾನು ಅಪ್ ಲೋಡ್ ಮಾಡ್ತೀನಿ ಅಂದಿದ್ದಾರೆ. ಅಷ್ಟೇ ಮೀಟರ್ ಆಫ್ ಮಾಡಿಕೊಂಡ ಆ ವ್ಯಕ್ತಿಗೆ ಈ ಕಮೆಂಟ್ ನನ್ನನ್ನು ಕಂಬಿ ಎಣಿಸುವಂತೆ ಮಾಡುತ್ತದೆ ಅನ್ನೋದು ಗೊತ್ತಾಗಿದೆ. ತಕ್ಷಣ ಕ್ಷಮೆ ಕೇಳಿ ವಿಷಯವನ್ನು ಅಲ್ಲಿಗೆ ಮುಗಿಸಿದ್ದಾರೆ
Discussion about this post