ತಿರುವನಂತಪುರ : ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ ಅಂದ್ರೆ ಅದಕ್ಕೆ ಕಾರಣ ಭೂಮಿಯ ಮೇಲೆ ಒಂದಿಷ್ಟು ಪ್ರಾಮಾಣಿಕ ಮಂದಿ ಉಳಿದುಕೊಂಡಿರುವುದು. ಅವರ ಸತ್ಯ ನಿಷ್ಟೆ ಕಾರಣದಿಂದ ಒಂದಿಷ್ಟು ಸಮೃದ್ಧಿ ನೆಲೆಸಿದೆ.
ಕೇರಳದಲ್ಲಿ ದೊಡ್ಡ ಮೊತ್ತದ ಲಾಟರಿ ಗೆದ್ದವರ ಮನೆಗಳನ್ನು ಹುಡುಕಿಕೊಂಡು ಹೋದ್ರೆ ಒಂದಲ್ಲ ಒಂದು ಇಂಟ್ರರೆಸ್ಟಿಂಗ್ ಸ್ಟೋರಿಗಳು ಸಿಗುತ್ತದೆ.
ಮೊನ್ನೆ ಮೊನ್ನೆ ಕುತ್ತಿಗೆ ತನಕ ಸಾಲ ಮಾಡಿದ್ದ ವ್ಯಕ್ತಿಯೊಬ್ಬರು ಕೋಟಿ ಬಹುಮಾನ ಗೆದ್ದುಕೊಂಡಿದ್ದರು.
ಇದೀಗ 6 ಕೋಟಿ ಬಹುಮಾನ ಗೆದ್ದವರ ಸುದ್ದಿ ಬಂದಿದೆ. ವಿಶೇಷ ಅಂದ್ರೆ ಈ ಸುದ್ದಿಯ ಹೀರೋ ಲಾಟರಿ ಗೆದ್ದವರಲ್ಲ, ಬದಲಿಗೆ ಲಾಟರಿ ಮಾರಾಟ ಮಾಡಿದವರು.
ಎರ್ನಾಕುಲಂ ಜಿಲ್ಲೆಯ ಅಲುವಾದ ಪಿಕೆ ಚಂದ್ರನ್ ಅವರಿಗೆ ಹಲವು ವರ್ಷಗಳಿಂದ ಲಾಟರಿ ಹುಚ್ಚು. ಚಿಕ್ಕ ಪುಟ್ಟ ಬಹುಮಾನಗಳನ್ನು ಗೆದ್ದ ಸಮಾಧಾನ ಅವರದ್ದು.
ಜೊತೆಗೆ ಇವರು ಲಾಟರಿ ಟಿಕೆಟ್ ಗಳನ್ನು ಸ್ಮಿಜಾ ಅನ್ನುವವರಿಂದ ಖರೀದಿಸುತ್ತಿದ್ದರು.
ಮೊನ್ನೆ ಭಾನುವಾರ ಚಂದ್ರನ್ ಅವರಿಗೆ ಕರೆ ಮಾಡಿದ್ದ ಸ್ಮಿಜಾ 12 ಟಿಕೆಟ್ ಗಳು ಉಳಿದುಕೊಂಡಿದೆ ಅಂದಿದ್ದಾರೆ. ಈ ವೇಳೆ 6142 ಸಂಖ್ಯೆ ಕೊನೆಗೊಳ್ಳುವ ಎಲ್ಲಾ ಟಿಕೆಟ್ ಗಳನ್ನು ಇಟ್ಟುಕೊಳ್ಳಿ, ಮುಂದಿನ ಸಲ ಸಿಕ್ಕಾಗ ಟಿಕೆಟ್ ಹಣ ಕ್ಲೀಯರ್ ಮಾಡುವುದಾಗಿ ಹೇಳಿದ್ದಾರೆ.
ಆಶ್ಚರ್ಯ ಅಂದ್ರೆ ಬೆಳಗ್ಗೆ ಟಿಕೆಟ್ ಮಾರಿದ್ದ ಸ್ಮಿಜಾ ಸಂಜೆಯಾಗುವ ಹೊತ್ತಿಗೆ ಚಂದ್ರನ್ ಅವರ ಮನೆ ದಾರಿ ಹಿಡಿದಿದ್ದರು.
ಕಾರಣ ಸ್ಮಿಜಾ ಅವರು ಟಿಕೆಟ್ ಪಡೆಯುತ್ತಿದ್ದ ಭಾಗ್ಯ ಲಕ್ಷ್ಮಿ ಲಾಟರಿ ಸೆಂಟರ್ ನವರು ಕರೆ ಮಾಡಿ, ನೀವು ಮಾರಾಟ ಮಾಡಿದ ಟಿಕೆಟ್ ಗೆ 6 ಕೋಟಿ ಬಹುಮಾನ ಬಂದಿದೆ ಅಂದಿದ್ದಾರೆ. ನಂಬರ್ ಯಾವುದು ಎಂದು ನೋಡಿದ್ರೆ ಅದು SD316142. ಅಂದ್ರೆ 6142 ಸಂಖ್ಯೆಯಿಂದ ಕೊನೆಗೊಳ್ಳುವ ಟಿಕೆಟ್.
ಹೀಗಾಗಿಯೇ ಚಂದ್ರನ್ ಮನೆಗೆ ದೌಡಾಯಿಸಿದವರೇ 200 ಪೆಡದು ಟಿಕೆಟ್ ಅನ್ನು ಕೊಟ್ಟು, ನಿಮಗೆ 6 ಕೋಟಿ ಬಹುಮಾನ ಬಂದಿದೆ ಅಂದಿದ್ದಾರೆ.
ಇದೀಗ SBI ಬ್ಯಾಂಕ್ ನಲ್ಲಿ ಟಿಕೆಟ್ ಡೆಪಾಸಿಟ್ ಮಾಡಿರುವ ಚಂದ್ರನ್ ಬಹುಮಾನದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದು ಕಡೆ ಸ್ಮಿಜಾ ಅವರ ಪ್ರಾಮಾಣಿಕತೆಯನ್ನು ಮೆಚ್ಚಿರುವ KPMS ಅವರನ್ನು ಸನ್ಮಾನಿಸಿದೆ.
Discussion about this post