ಬಿಗ್ ಬಾಸ್ ಮನೆಯಲ್ಲಿ ಒಂದೆರೆಡು ಲವ್ ಸ್ಟೋರಿಗಳು ಶುರುವಾಗಿಲ್ಲ ಅಂದ್ರೆ ಈ ಸೀಸನ್ ಗೆ ಮಜಾನೇ ಬರೋದಿಲ್ಲ.
ಈ ಹಿಂದಿನ ಸೀಸನ್ ಗಳಲ್ಲಿಯೂ ಬಿಗ್ ಬಾಸ್ ಮನೆಗೆ ಹೋದವರು ಪ್ರೀತಿ ಪ್ರೇಮ ಎಂದು ಬಿದ್ದವರೇ.
ಅದರಲ್ಲಿ ಸಕ್ಸಸ್ ಆಗಿದ್ದು ಚಂದನ್ ಮತ್ತು ನಿವೇದಿತಾ ಜೋಡಿ.
ಇದೀಗ ಸೀಸನ್ 8 ರಲ್ಲಿ ಬ್ರೋಗೌಡ ಖ್ಯಾತಿಯ ಶಮಂತ್ ವೀಕ್ಷಕರ ಗಮನ ಸೆಳೆಯವ ಸಲುವಾಗಿ ಮತ್ತು ಓಟು ಗಿಟ್ಟಿಸಿಕೊಳ್ಳುವ ಸಲುವಾಗಿ ಪ್ರೀತಿಯ ಪಗಡೆ ಉರುಳಿಸಿದ್ದಾರೆ.
ನಾನು ಮನೆಯ ಸದಸ್ಯರೊಬ್ಬರನ್ನು ಪ್ರೀತಿಸುತ್ತಿದ್ದೇನ ಎಂದು ನಿರ್ಮಲಾ ಹಾಗೂ ಭಾರತ್ ಭಟ್ ಅವರಲ್ಲಿ ಹೇಳಿಕೊಂಡಿರುವ ಬ್ರೋಗೌಡ ಆ ಸದಸ್ಯೆ ಯಾರು ಅನ್ನುವುದನ್ನು ಬಹಿರಂಗ ಪಡಿಸಿರಲಿಲ್ಲ.
ಇದೀಗ ಸೀಸನ್ 8 ರ ಎರಡನೇ ದಿನ ಎಪಿಸೋಡ್ ಅನ್ನು ಗಮನಿಸಿದ್ರೆ ಬ್ರೋಗೌಡ ಅಗ್ನಿ ಸಾಕ್ಷಿ ಖ್ಯಾತಿಯ ವೈಷ್ಣವಿ ಅವರ ಹಿಂದೆ ಬಿದ್ದಿರೋದು ಪಕ್ಕಾ ಆಗಿದೆ.
ವೈಷ್ಣವಿಯವರಿಗೆ ಕ್ಯಾಪ್ಟನ್ ಕೋಣೆಯ ರೆಸ್ಟ್ ರೂಮ್ ಬಿಟ್ಟು ಕೊಟ್ಟಿರೋದೇನು, ವೈಷ್ಣವಿ ಅವರ ವಸ್ತುಗಳ ಬಗ್ಗೆ ಕಾಳಜಿ ತೋರಿಸಿದ್ದೇನು.
ಈ ಮೂಲಕ ಬ್ರೋಗೌಡ ವೈಷ್ಣವಿ ಹಿಂದೆ ಬಿದ್ದಿರೋದು ಪಕ್ಕಾ ಆಗಿದೆ.
ಈ ಮೂಲಕ ಧನುಶ್ರೀ, ದಿವ್ಯ ಉರುಡುಗ, ದಿವ್ಯಾ ಸುರೇಶ್ ಪೈಕಿ ಒಬ್ಬರ ಮೇಲೆ ಬ್ರೋಗೌಡ ದೃಷ್ಟಿ ನೆಟ್ಟಿದ್ದಾರೆ ಅನ್ನೋ ಊಹೆ ಸುಳ್ಳಾಗಿದೆ.
ಹಾಗಂತ ಈ ಪ್ರೀತಿ ಪ್ರೇಮದ ಕಥೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಾಗಿಲ್ಲ. ಯಾಕಂದ್ರೆ ಬಿಗ್ ಬಾಸ್ ಅನ್ನೋದೊಂದು ಆಟ. ಅಲ್ಲಿ ಪ್ರೀತಿ ಪ್ರೇಮ ಅನ್ನುವುದೆಲ್ಲಾ ಮನಸ್ಸಿನಿಂದ ಬರೋದಿಲ್ಲ. ಅಲ್ಲಿ ಬರೋದೆಲ್ಲವೂ ತಲೆಯಿಂದ.
Discussion about this post