ಬಿಗ್ ಬಾಸ್ ಮನೆಗೆ ನಿರೀಕ್ಷೆಯಂತೆ ಬ್ರಹ್ಮ ಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಪ್ರವೇಶಿಸಿದ್ದಾರೆ.
ಈ ವೇಳೆ ಡ್ರಗ್ಸ್ ಪ್ರಕರಣ ಕುರಿತಂತೆ ಮಾತನಾಡಿರುವ ಗೀತಾ, ನಾನು ಡ್ರಗ್ಸ್ ಸೇವಿಸುತ್ತಿದ್ದೇನೆ ಎಂದು ವಿಚಾರಣೆಗೆ ಕರೆಯಲಿಲ್ಲ. ನನಗೇನಾದರೂ ಈ ಬಗ್ಗೆ ಮಾಹಿತಿ ಇದೆಯೇ ಅನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಕರೆಸಿದ್ದರು ಅಂದಿದ್ದಾರೆ.
ಜೊತೆಗೆ ತಾವು ಜೀವನದಲ್ಲಿ ಅನುಭವಿಸಿದ ಹಿಂಸೆಗಳ ಬಗ್ಗೆ ಮಾತನಾಡಿರುವ ಗೀತಾ, ಹಿಂದೆ ನಾನು ದಪ್ಪಗಿದ್ದೇನೆ ಅನ್ನುವುದೇ ನನಗೆ ಸಮಸ್ಯೆಯಾಗಿತ್ತು. ದಪ್ಪಗಿರುವ ಕಾರಣದಿಂದ ಸಾಕಷ್ಟು ಹಿಂಸೆಯನ್ನು ಅನುಭವಿಸಿದ್ದೇನೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಹೋಗಿರುವ ಗೀತಾ ಭಾರತಿ ಭಟ್ ಎಷ್ಟು ಮುದ್ದಾಗಿದ್ದಾರೆ ಗೊತ್ತಾ…?
ಎಲ್ಲರೂ ನನ್ನ ದಪ್ಪದ ಬಗ್ಗೆ ಮಾತನಾಡುವವರೇ. ನಮ್ಮ ಪೋಷಕರ ಬಳಿ ಅವಳು ಯಾಕೆ ದಪ್ಪಗಿದ್ದಾಳೆ, ಅವಳಿಗೆ ಯಾವ ಅಕ್ಕಿಯ ಊಟ ಹಾಕ್ತೀರಾ ಎಂದೆಲ್ಲಾ ಪ್ರಶ್ನಿಸುತ್ತಿದ್ದರು.
ಆದರೆ ಯಾರೊಬ್ಬರೂ ನಾನ್ಯಾಕೆ ದಪ್ಪಗಿದ್ದೇನೆ ಅನ್ನುವ ಬಗ್ಗೆ ಕೇಳಲಿಲ್ಲ. ದಪ್ಪಗಿರುವ ಕಾರಣದಿಂದ ನಾನು ಯಾವ ಸಂಕಷ್ಟ ಅನುಭವಿಸುತ್ತಿದ್ದೇನೆ ಅನ್ನುವುದನ್ನು ಅರಿಯಲಿಲ್ಲ.
ಆದರೆ ದಿನ ಕಳೆದಂತೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ, ಹೌದು ನಾನು ದಪ್ಪಗಿದ್ದೇನೆ ಏನಿವಾಗ ಎಂದು ಧೈರ್ಯ ತಂದುಕೊಂಡೆ. ಬಳಿಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡೆ ಬೆಳೆದೆ ಎಂದು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಅಂದ ಹಾಗೇ ನನ್ನ ಬದುಕಿನಲ್ಲಿ ನಡೆದ ಅಪಘಾತ ಮತ್ತು ಬಳಿಕ ಪಡೆದ ಚಿಕಿತ್ಸೆಯ ಕಾರಣದಿಂದ ದಪ್ಪಗಾದೆ ಎಂದು ಗೀತಾ ಭಾರತಿ ಹೇಳಿದ್ದಾರೆ.
Discussion about this post