ಬೆಂಗಳೂರು : ದರ್ಶನ್ ಕುರಿತಂತೆ ನಟ ಜಗ್ಗೇಶ್ ಆಡಿರುವ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿದೆ.
ದರ್ಶನ್ ಅಭಿಮಾನಿಗಳು ಇದೀಗ ಜಗ್ಗೇಶ್ ವಿರುದ್ಧ ತೊಡೆ ತಟ್ಟಿದ್ದಾರೆ. ಸಂಕಷ್ಟದಲ್ಲಿರುವ ಚಂದನವನಕ್ಕಿದು ಶೋಭೆ ತರುವ ವಿಚಾರವಲ್ಲ.
ಒಂದು ವೇಳೆ ವೈರಲ್ ಆಗಿರುವ ಆಡಿಯೋ ಜಗ್ಗೇಶ್ ಅವರದ್ದೇ ಆಗಿದ್ದರೆ ನಿಜಕ್ಕೂ ಇದೊಂದು ದೊಡ್ಡ ಅಪರಾಧ ಅನ್ನುವುದರಲ್ಲಿ ಎರಡು ಮಾತಿಲ್ಲ.
ಇಷ್ಟೆಲ್ಲಾ ನಡೆಯುತ್ತಿದ್ದರೂ ದರ್ಶನ್ ಮೌನಕ್ಕೆ ಶರಣಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಕನಿಷ್ಟ ಪಕ್ಷ ಅಭಿಮಾನಿಗಳನ್ನು ಸಮಾಧಾನಪಡಿಸುವ ಸಲುವಾಗಿಯಾದರೂ ದರ್ಶನ್ ತುಟಿ ಬಿಚ್ಚಲೇಬೇಕು.
ಇದಕ್ಕೆ ಪೂರಕವಾಗಿ ಇದೀಗ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದು ಇಬ್ಬರೂ ದೊಡ್ಡ ನಟರೇ. ಹೀಗಾಗಿ ಈ ಮಾತಿನ ಅರ್ಥ, ಮಾತನಾಡುವ ವೇಳೆ ಆಗಿರುವ ವ್ಯತ್ಯಾಸಗಳನ್ನು ಇಬ್ಬರೂ ನಟರು ಬಗೆಹರಿಸಿಕೊಳ್ಳಬೇಕು ಅಂದಿದ್ದಾರೆ.
ವಿವಾದ ಕುರಿತಂತೆ ದರ್ಶನ್ ಮಧ್ಯ ಪ್ರವೇಶಿಸಿ ಈ ವಿಚಾರಕ್ಕೆ ಇತ್ಯರ್ಥ ಹಾಡೋದು ಒಳ್ಳೆಯದು ಅಂದಿರುವ ಮುಖ್ಯಮಂತ್ರಿ ಚಂದ್ರು, ಕೊರೊನಾ ಬಂದ ಮೇಲೆ ಸಿನಿಮಾ ರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ.
ಚಂದನವನ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯವರು ನಟರೊಂದಿಗೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.
Discussion about this post