ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಈಗಾಗಲೇ ಮೊದಲ ಪ್ರೋಮೋ ಬಿಡುಗಡೆಯಾಗಿದೆ.
ಜೊತೆಗೆ ಸೀಸನ್ 8ರಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವ ಕುರಿತಂತೆ ಚರ್ಚೆಗಳು ಕೂಡಾ ನಡೆಯುತ್ತಿದೆ. ಆದರೆ ಸ್ಪಷ್ಟ ಚಿತ್ರಣವೊಂದು ಸಿಕ್ಕಿಲ್ಲ. ಕಳೆದ ಎಲ್ಲಾ ಸೀಸನ್ ಗಳಲ್ಲಿ ಸ್ಪರ್ಧಿಗಳ ಹೆಸರು ಬೇಗ ಲೀಕ್ ಆಗಿದ್ದ ಕಾರಣ ಸಮಸ್ಯೆಯಾಗಿತ್ತು.
ಹೀಗಾಗಿ ಹೇಗಾದರೂ ಸರಿ ಕೊನೆಯ ದಿನದ ತನಕವಾದರೂ ಸ್ಪರ್ಧಿಗಳ ಹೆಸರಿನ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಳ್ಳಬೇಕು ಅನ್ನುವುದು ವಾಹಿನಿಯ ನಿರ್ಧಾರ. ಅದು ಎಷ್ಟರ ಮಟ್ಟಿಗೆ ಸಾಧ್ಯವೋ ಗೊತ್ತಿಲ್ಲ.
ಈ ನಡುವೆ ಈಗಾಗಲೇ ಸ್ಪರ್ಧಿಗಳು ಬಿಗ್ ಬಾಸ್ ಮನೆ ಕಡೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಕಳೆದ ಬಾರಿಗಿಂತ ಸಾಕಷ್ಟು ದಿನಗಳ ಮುಂಚಿತವಾಗಿಯೇ ಸ್ಪರ್ಧಿಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಳ್ಳಲಾಗಿದೆಯಂತೆ.
ಇದನ್ನೂ ಓದಿ : 90 ದಿನದ ಬಿಗ್ ಬಾಸ್ ಆಟಕ್ಕೆ ಸುದೀಪ್ ಗಳಿಸೋದು ಎಷ್ಟು ಕೋಟಿ ಗೊತ್ತಾ….?
ಕೊರೋನಾ ಕಾರಣದಿಂದ ಸ್ಪರ್ಧಿಗಳನ್ನು 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಿಸಿ ಬಳಿಕ ಅವರನ್ನು ಬಿಗ್ ಬಾಸ್ ವೇದಿಕೆ ಹತ್ತಿಸುತ್ತಾರಂತೆ.
ಒಂದು ವೇಳೆ ಈ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದಿದ್ದರೆ ನಾಳೆ ಮತ್ತೊಂದು ಅನಾಹುತವಾಗಬಹುದು ಅನ್ನುವುದು ವಾಹಿನಿಯ ಮುನ್ನೆಚ್ಚರಿಕೆ.
ಹೀಗಾಗಿ ಎಲ್ಲಾ ಸ್ಪರ್ಧಿಗಳನ್ನು ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದ್ದು, ಕ್ವಾರಂಟೈನ್ ಅವಧಿ ಮುಗಿಸಿ ಕೊರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆ ಮಾತ್ರ ಅವರು ವೇದಿಕೆ ಹತ್ತಲಿದ್ದಾರೆ.
ಮಾತ್ರವಲ್ಲದೆ ಬಿಗ್ ಬಾಸ್ ಕಾರ್ಯಕ್ರಮದ ಹಿಂದೆ ದುಡಿಯುವವರಿಗೂ ಈ ನಿಯಮಗಳು ಅನ್ವಯವಾಗಲಿದೆಯಂತೆ.
Discussion about this post