ಬೆಂಗಳೂರು : ಕೆಲವೇ ದಿನಗಳಲ್ಲಿ ಮಹಾಮನೆಯ ಆಟ ಶುರುವಾಗಲಿದೆ. ಕೊರೋನಾ ಆತಂಕವನ್ನು ಮರೆತಿರುವ ಜನ ಒಂದಿಷ್ಟು ದಿನಗಳಲ್ಲಿ ಬಿಗ್ ಬಾಸ್ ಅನ್ನೋ ರಿಯಾಲಿಟಿ ಶೋದಲ್ಲಿ ಮುಳುಗಲಿದ್ದಾರೆ.
ಈಗಾಗಲೇ ಸೀಸನ್ 8ರ ಸಿದ್ದತೆಗಳು ಪ್ರಾರಂಭಗೊಂಡಿದ್ದು, ಪ್ರೋಮೋ ಕೂಡಾ ಆನ್ ಏರ್ ನಲ್ಲಿದೆ.
ಇನ್ನು ಸ್ಪರ್ಧಿಗಳ ಆಯ್ಕೆಗಳು ಅಂತಿಮಗೊಂಡಿದ್ದು, ಮಹಾಮನೆಗೆ ಕಳುಹಿಸುವ ಕೊನೆಯ ಪ್ರಕ್ರಿಯೆ ಜಾರಿಯಲ್ಲಿದೆ.
ಈ ನಡುವೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಗೆ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಅನ್ನುವುದೇ ಗಂಭೀರ ಚರ್ಚೆಯ ವಿಷಯವಾಗಿದೆ.
ಲಭ್ಯ ಮಾಹಿತಿಗಳ ಪ್ರಕಾರ ಕಳೆದ 5 ಸೀಸನ್ ಗಳನ್ನು ನಡೆಸಲು ಸುದೀಪ್ 21 ಕೋಟಿ ಸಂಭಾವನೆ ಪಡೆದಿದ್ದರು ಅನ್ನಲಾಗಿದೆ. ಅಂದರೆ ತಲಾ ಒಂದು ಸೀಸನ್ ಗೆ 4 ಕೋಟಿಯ ಲೆಕ್ಕ. ಆದರೆ ಈ ಬಾರಿ ಸೀಸನ್ 8ರ ಸಂಭಾವನೆ ಮತ್ತಷ್ಟು ಏರಿರುವ ಸಾಧ್ಯತೆಗಳಿದೆ.
ಒಂದು ಅಂದಾಜಿನ ಪ್ರಕಾರ ಈ ಬಾರಿ ಸುದೀಪ್ ಅವರ ಸಂಭಾವನೆ ಸಿಕ್ಕಾಪಟ್ಟೆ ಏರಿದ್ದು 8 ರಿಂದ 10 ಕೋಟಿ ಪಡೆಯಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿಯ ಬಿಗ್ ಬಾಸ್ ನಿರೀಕ್ಷಿತ TRP ಗಳಿಸುವಲ್ಲಿ ವಿಫಲವಾಗಿತ್ತು.
ಹೀಗಾಗಿ ಈ ಬಾರಿ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಬಿಗ್ ಬಾಸ್ ಮೂಡಿಬರಲಿದೆ. ಜೊತೆಗೆ ಸುದೀಪ್ ಅವರು ಕೂಡಾ ಈ ಹಿಂದಿನ ಸಂಚಿಕೆಗಳಿಂದ ಒಂದಿಷ್ಟು ಹೆಚ್ಚೆ ಅನ್ನಿಸುವಷ್ಟು ಸೀಸನ್ 8 ರಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈ ಕಾರಣದಿಂದ ಸುದೀಪ್ ಅವರ ಸಂಭಾವನೆ ಸಿಕ್ಕಾಪಟ್ಟೆ ಏರಿದೆಯಂತೆ.
Discussion about this post