ತಮಿಳುನಾಡು : ಅಣ್ಣಾಮಲೈ…. ಕರ್ನಾಟಕದ ಸಿಂಗಂ ಎಂದೇ ಪ್ರಸಿದ್ಧರಾದವರು. ಖಾಕಿ ತೊಟ್ಟುಕೊಂಡಿದಷ್ಟು ದಿನ ಖದರ್ ತೋರಿದ ಅಣ್ಣಾಮಲೈ ಅವರಿಗೆ ಅಭಿಮಾನಿಯಾಗಿದ್ದವರು ಅಸಂಖ್ಯಾತ ಮಂದಿ.
ಅದೇನಾಯ್ತೋ ಗೊತ್ತಿಲ್ಲ ಕಷ್ಟಪಟ್ಟು ಪಡೆದಿದ್ದ ಐಪಿಎಸ್ ಹುದ್ದೆ ತೊರೆಯಲು ನಿರ್ಧರಿಸಿದ ಅಣ್ಣಾಮಲೈ ನಾನು ಮಾಡುವುದು ಬೇರೇನೋ ಇದೆ ಎಂದು ಖಾಕಿ ಕಳಚಿದ್ದರು. ಹಾಗೇ ಹೋದವರು ಕಾಣಿಸಿಕೊಂಡಿದ್ದು ತಮಿಳುನಾಡು ರಾಜಕೀಯದಲ್ಲಿ.
ತಮಿಳುನಾಡಿನಲ್ಲಿ ಕಮಲ ಅರಳಿಸುವ ಸಲುವಾಗಿ ಬಿಜೆಪಿ ಸೇರಿದ ಅಣ್ಣಾಮಲೈ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಯುವಕರನ್ನು ಸಂಘಟಿಸುತ್ತಿರುವ ಅಣ್ಣಾಮಲೈ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಅಣ್ಣಾಮಲೈ ಅವರ ಫೋಟೋ ಒಂದು ವೈರಲ್ ಆಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಣ್ಣಾಮಲೈ ಅವರು ಬಿಜೆಪಿ ಸೇರಿರುವ ಬಗ್ಗೆ ಆಕ್ರೋಶವಿರುವ ಮಂದಿ ಅವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಮಂದಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ನೋಡಿ ಅಂದರೆ, ಅಣ್ಣಾಮಲೈ ಬಗ್ಗೆ ಒಲವಿರುವ ಮಂದಿ ಇದು ಅಣ್ಣಾಮಲೈ ಅವರ ವಿಧೇಯತೆಗೆ ಸಾಕ್ಷಿ ಅಂದಿದ್ದಾರೆ.
ಆದರೆ ಈ ಪೋಟೋ ನೋಡಿದರೆ ಸಾವಿರ ಅಭಿಪ್ರಾಯಗಳು ಸಿಗಬಹುದು. ಹೀಗಾಗಿ ಅಸಲಿ ಕಥೆಯನ್ನು ಫೋಟೋದಲ್ಲಿರುವ ಅಣ್ಣಾಮಲೈ ಅಥವಾ ಸಿಟಿ ರವಿಯವರೇ ಹೇಳಬೇಕು.
ಒಟ್ಟಿನಲ್ಲಿ ಈ ಪೋಟೋ ನೋಡಿದರೆ ನಿಮಗೇನು ಅನ್ನಿಸುತ್ತಿದೆ ಕಮೆಂಟ್ ಮಾಡಿ.
Discussion about this post