ನವದೆಹಲಿ : ಪಾಕಿಸ್ತಾನದಲ್ಲಿ ಹರಡುವ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಚೀನಾದ ಸಿನೋವಾಕ್ ಲಸಿಕೆ ಹಾಗೂ ಆಕ್ಸ್ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಕೊರೋನಾ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿಸಲಾಗಿತ್ತು.
ಯಾವಾಗ ಚೀನಾದ ಔಷಧೇ ಶೇ 50.4 ಕ್ಕಿಂತ ಹೆಚ್ಚು ಪರಿಣಾಮಕಾರಿಯಲ್ಲ ಎಂದು ಬ್ರೆಜಿಲಿಯನ್ ಕ್ಲಿನಿಕಲ್ ಟ್ರಯಲ್ ನಿಂದ ಗೊತ್ತಾಯ್ತೋ, ಮಿತ್ರ ದೇಶದ ಲಸಿಕೆ ಮೇಲೆ ಪಾಕಿಸ್ತಾನವೂ ವಿಶ್ವಾಸ ಕಳೆದುಕೊಂಡಿದೆ. ಪ್ರಯೋಗಗಳಿಂದ ಕಂಡು ಬಂದಿದೆ.
ಹೀಗಾಗಿ ಇದೀಗ ಕೊರೋನಾ ಸೋಂಕು ನಿಯಂತ್ರಿಸಲು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಇಮ್ರಾನ್ ಸರ್ಕಾರ ಅನುಮೋದಿಸಿದೆ.
ಸ್ಥಳೀಯ ಔಷಧೀಯ ಕಂಪೆನಿಗಳು ಸ್ಪುಟ್ನಿಕ್ ವಿ ಲಸಿಕೆಯನ್ನು ಆಮದು ಮಾಡಿಕೊಳ್ಳಬಹುದಾಗಿದೆ.
Discussion about this post