ಬೆಂಗಳೂರು : ಕೊರೋನಾ ರುದ್ರನರ್ತನದ ನಡುವೆ ನೊಂದವರಿಗೆ ಸಾಂತ್ವನ ಹೇಳುವ ಕಾರ್ಯ ನಡೆಯುತ್ತಿದೆ. ಶಕ್ತಿಯುಳ್ಳ ಕೈಗಳು ನೊಂದವರ ಕಣ್ಣೀರು ಓರೆಸುತ್ತಿದೆ.
ಈ ಸಾಲಿಗೆ ಇದೀಗ ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿ ಹಾಗೂ ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಕೂಡ ಸೇರಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೊಡ್ಡ ಮೊತ್ತವೊಂದರ ದೇಣಿಗೆ ನೀಡಿರುವ ಅವರು ಕೊರೋನಾ ಸೋಂಕಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.
ತಾವು ಯಾವುದೇ ದೊಡ್ಡಸ್ತಿಕೆ ತೋರುವುದಕ್ಕಲ್ಲ ಸಹಾಯ ಮಾಡುತ್ತಿರುವುದು ಎಂದು ಸ್ಪಷ್ಟಪಡಿಸಿರುವ ಅವರು, ನೀವು ಕೂಡ ಈ ಕೆಲಸದಲ್ಲಿ ಭಾಗಿಯಾಗಲಿ ಎಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿರುವ ಬಗ್ಗೆ ಚೆಕ್ ಅನ್ನು ಪ್ರದರ್ಶಿಸಿದ್ದಾರೆ.
ಈ ಹಿಂದೆ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ಮಾತನಾಡಿದ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ, ಐರನ್ ಅಂಗಡಿ, ಎಳನೀರು, ಹೂ ಮಾರುವವರು, ಫುಡ್ಟ್ರಕ್ ಇಟ್ಟುಕೊಂಡಿರುವವರು, ಬೀದಿ ಬದಿ ವ್ಯಾಪಾರಿಗಳು, ಬೋಂಡ-ಬಜ್ಜಿ ಮಾರುವವರು, ದಿನಗೂಲಿಯವರು, ಗಾರೆ ಕೆಲಸಕ್ಕೆ ಹೋಗುವವರು ಹೀಗೆ ತೀರಾ ಸಂಕಷ್ಟದಲ್ಲಿರುವ ಮಂದಿಗೆ ಸಹಾಯ ಹಸ್ತ ಚಾಚುತ್ತಿರುವುದಾಗಿ ಹೇಳಿದ್ದರು.
ನಾನು ಬಿಗ್ ಬಾಸ್ ಗೆ ಹೋಗಿ ಬಂದೆ. ಹಾಗಾಗಿ ನನ್ನ ಪರಿಸ್ಥಿತಿ ಸುಧಾರಿಸಿದೆ. ಒಂದು ವೇಳೆ ನಾನು ಬಿಗ್ ಬಾಸ್ ಮನೆಗೆ ಹೋಗಿರುತ್ತಿದ್ರೆ, ಈ ಸಂದರ್ಭದಲ್ಲಿ ಲಾಕ್ ಡೌನ್ ತೀವ್ರತೆಗೆ ಸಿಲುಕಿದ ನನ್ನ ಪರಿಸ್ಥಿತಿ ಉಳಿದವರಿಗಿಂತ ಭಿನ್ನವಾಗಿರುತ್ತಿರಲಿಲ್ಲ. ಯಾಕಂದ್ರೆ ನಾನೊಬ್ಬ ಬೀದಿ ಬದಿ ವ್ಯಾಪಾರಿ ಅಂದಿದ್ದಾರೆ.
Discussion about this post