ನವದೆಹಲಿ : ಕುಲಗೆಟ್ಟು ಹೋಗಿರುವ ರಾಜಕೀಯ ರಂಗವನ್ನು ಸ್ವಚ್ಛಗೊಳಿಸಲು ಸರ್ವೋಚ್ಛ ನ್ಯಾಯಾಲಯ ಮುಂದಾಗಿದೆ. ಈ ಸಂಬಂಧ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿರುವ ಸುಪ್ರೀಂಕೋರ್ಟ್ ಇನ್ಮುಂದೆ ನಿಮ್ಮ ಕಳ್ಳಾಟಗಳು ನಡೆಯುವುದಿಲ್ಲ ಅನ್ನುವ ಸಂದೇಶ ರವಾನಿಸಿದೆ.
ತಮ್ಮ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ಬಹಿರಂಗಪಡಿಸದ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಅಮಾನತುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ದಂಡ ವಿಧಿಸಿ ಈ ಆದೇಶ ಹೊರಡಿಸಿದೆ.
ತಮ್ಮ ಪಕ್ಷದ ಚುನಾವಣಾ ಅಭ್ಯರ್ಥಿಗಳ ಅಪರಾಧ ದಾಖಲೆಗಳನ್ನು ಬಹಿರಂಗಪಡಿಸದ ಹಿನ್ನಲೆಯಲ್ಲಿಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಒಂಬತ್ತು ರಾಜಕೀಯ ಪಕ್ಷಗಳು ನ್ಯಾಯಾಂಗ ನಿಂದನೆ ಎಸಗಿವೆ ಎಂದು ಹೇಳಿರುವ ಸುಪ್ರೀಂಕೋರ್ಟ್, ಅವುಗಳಿಗೆ ದಂಡ ವಿಧಿಸಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಐದು ಪಕ್ಷಗಳಿಗೆ ತಲಾ 1 ಲಕ್ಷ ರೂ ದಂಡ ಕಟ್ಟಬೇಕಾಗಿದೆ. ಬಿಹಾರ ವಿಧಾನಸಭೆ ಚುನಾವಣೆ ವೇಳೆ ಆದೇಶ ಪಾಲಿಸದ ಕಾರಣಕ್ಕೆ ಸಿಪಿಎಂ ಮತ್ತು ಎನ್ಸಿಪಿಗಳಿಗೆ ತಲಾ 5 ಲಕ್ಷ ರೂ ದಂಡ ಕಟ್ಟಬೇಕಾಗಿದೆ.
ಇದೇ ವೇಳೆ ಈ ವರ್ತನೆ ಮತ್ತೆ ಮರಕಳಿಸಬಾರದು ಅನ್ನುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಅಪರಾಧ ದಾಖಲೆಗಳನ್ನು ತಮ್ಮ ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶಿಸಿದೆ. ಜೊತೆಗೆ ಈ ವಿವರಗಳು ಮತದಾರರಿಗೆ ಸಿಗುವಂತಿರಬೇಕು, ಹೀಗಾಗಿ ಇದಕ್ಕೊಂದು ಪ್ರತ್ಯೇಕ APP ಸೃಷ್ಟಿಸಲು ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ.
ಅಭ್ಯರ್ಥಿ ಆಯ್ಕೆ ನಡೆದ 48 ಗಂಟೆಗಳ ಒಳಗೆ ಅವರ ಅಪರಾಧ ಪ್ರಕರಣಗಳ ದಾಖಲೆಗಳು ಸಾರ್ವಜನಿಕರಿಗೆ ಸಿಗಬೇಕು. ಜೊತೆಗೆ ಅಪರಾಧ ಹಿನ್ನೆಲೆಯಿದ್ದರೂ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು ಯಾಕೆ ಅನ್ನುವ ಬಗ್ಗೆಯೂ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ರಾಜಕೀಯ ರಂಗ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕೈಗೊಂಡಿರುವ ಹೆಜ್ಜೆ ಚೆನ್ನಾಗಿದೆ. ಆದರೆ ನೋಟು, ಹೆಂಡ ಮದ್ಯ ವಿತರಿಸುವ ಕ್ರಿಮಿನಲ್ ಗಳ ವರ್ತನೆಗೆ ಕಡಿವಾಣ ಬೀಳುವುದು ಹೇಗೆ.
Records of criminal cases have to be made public by parties within 48 hours of the candidate’s selection, the Supreme Court said in a big step to cleanse politics.
Discussion about this post