Sunday, March 7, 2021

ಮನಮೋಹನ್ ಸಿಂಗ್ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ :ಮೋದಿಗೆ ಕಾಂಗ್ರೆಸ್ ತಿರುಗೇಟು

Must read

- Advertisement -
- Advertisement -

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮರಣಹೋಮ ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, 2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರ ಮತ್ತು ಚಿತ್ರಗಳನ್ನುಮಾಧ್ಯಮಗಳ ಬಿಡುಗಡೆ ಮಾಡಿದರು.

  1. 2008 ಜೂನ್ 19 ರಂದು ಪಾಕಿಸ್ತಾನದ ಪೂಂಚ್ ಪ್ರದೇಶ
  2. .2008 ಆಗಸ್ಟ್ 30 ರಿಂದ ಸೆಪ್ಟೆಂಬರ್ 1ರವರೆಗೆ ಪಾಕ್ ಆಕ್ರಮಿತ ಶಾರದಾ ಸೆಕ್ಟರಿನ ನೀಲಂ ನದಿ ಕಣಿವೆ
  3. 2013 ಜನವರಿ 6 ರಂದು ಸಾವನ್ ಪಾತ್ರಾ ಚೆಕ್ ಪೋಸ್ಟ್
  4. 2013 ಜುಲೈ 27 ಮತ್ತು 28 ರಂದು ನಾಜಪುರ್ ಕಣಿವೆ ಪ್ರದೇಶ
  5. 2013 ಆಗಸ್ಟ್ 6 ರಂದು ನೀಲಮ್ ನದಿ ಕಣಿವೆಯಲ್ಲಿ
  6.  2014 ಜನವರಿ 14 ರಂದು ನೀಲಮ್ ನದಿ ಕಣಿವೆ ಪ್ರದೇಶದಲ್ಲಿ ಸರ್ಜಿಕಲ್ ನಡೆಸಿರುವ ಕುರಿತಂತೆ ರಾಜೀವ್ ಶುಕ್ಲಾ ಮಾಹಿತಿ ಕೊಟ್ಟಿದ್ದಾರೆ.

ಆದರೆ 2016ರ ಸೆಪ್ಟೆಂಬರ್ 29 ರಂದು ಡಿಜಿಎಂಒ ಸುದ್ದಿಗೋಷ್ಠಿ ನಡೆಸಿ ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿರುವುದಾಗಿ ಹೇಳಿಕೊಂಡಿತ್ತು.

ಹೀಗಾಗಿ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು, ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್(ಡಿಜಿಎಂಒ)ಗೆ ಮಾಹಿತಿ ಹಕ್ಕಿನ ಅಡಿ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು.

ಇದಕ್ಕೆ ಉತ್ತರಿಸಿದ್ದ ಡಿಜಿಎಂಒ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಅನ್ನುವುದಕ್ಕೆ ನಮ್ಮ ವಿಭಾಗದಲ್ಲಿ ಯಾವುದೇ ದಾಖಲೆಗಳು ಇಲ್ಲ ಅಂದಿತ್ತು.

ಹಾಗಾದ್ರೆ ಸುಳ್ಳು ಹೇಳುತ್ತಿರುವವರು ಯಾರು, ಸತ್ಯ ಹೇಳುತ್ತಿರುವವರು ಯಾರು…? 

- Advertisement -
- Advertisement -
- Advertisement -

Latest article