ನವದೆಹಲಿ : ವಿಶ್ವದ 60 ದೇಶಗಳಲ್ಲಿ ಈಗಾಗಲೇ 5G ಸೇವೆ ಚಾಲ್ತಿಯಲ್ಲಿದ್ದು ಮುಂದಿನ ವರ್ಷದಿಂದ ಈ ದೇಶಗಳ ಪಟ್ಟಿಗೆ ಭಾರತವೂ ಸೇರಲಿದೆ. ಹೌದು 2022ಕ್ಕೆ 5G ಸೇವೆಯ ತರಂಗಾಂತರ ಹಂಚಿಕೆ ಕಾರ್ಯ ನಡೆಯಲಿದ್ದು ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ 5G ಸೇವೆ ದೊರೆಯಲಿದೆ.
ಈ ಸಂಬಂಧ ಈಗಾಗಲೇ ಭಾರತಿ ಎರ್ ಟೆಲ್, ರಿಲಯನ್ ಜಿಯೋ, ವೋಡಾಫೋನ್ ಐಡಿಯಾ, ಗಾಂಧೀನಗರ, ಪುಣೆ, ಹೈದ್ರಬಾದ್, ಚೆನೈ, ಲಕ್ನೋ, ಅಹಮದಬಾದ್, ಜಾಮ್ ನಗರ, ದೆಹಲಿ, ಚಂಡೀಗಢ, ಮುಂಬೈ, ಕೊಲ್ಕತ್ತಾ, ಬೆಂಗಳೂರು ಮತ್ತು ಗುರುಗ್ರಾಮಗಳಲ್ಲಿ ಪ್ರಯೋಗ ನಡೆಸಿದ್ದು ಡಿಸೆಂಬರ್ 31ಕ್ಕೆ ಪ್ರಯೋಗ ಅಂತ್ಯವಾಗಲಿದೆ.
ಪ್ರಯೋಗ ಅಂತ್ಯವಾದ ಬೆನ್ನಲ್ಲೇ 5G ಸೇವೆಯ ತರಂಗಾಂತರ ಹಂಚಿಕೆ ಕಾರ್ಯ ನಡೆಯಲಿದ್ದು, ಏಪ್ರಿಲ್ ತಿಂಗಳ ಅಂತ್ಯಕ್ಕೆ ಈ ಕಾರ್ಯಪೂರ್ಣವಾಗುವ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಗಾಂಧೀನಗರ, ಪುಣೆ, ಹೈದ್ರಬಾದ್, ಚೆನೈ, ಲಕ್ನೋ, ಅಹಮದಬಾದ್, ಜಾಮ್ ನಗರ, ದೆಹಲಿ, ಚಂಡೀಗಢ, ಮುಂಬೈ, ಕೊಲ್ಕತ್ತಾ, ಬೆಂಗಳೂರು ಮತ್ತು ಗುರುಗ್ರಾಮಗಳಲ್ಲಿ ಅಂತೀ ವೇಗದ ಇಂಟರ್ ನೆಟ್ ಸೇವೆ ದೊರೆಯಲಿದೆ.
5G ಸೇವೆ ಜಾರಿಯಾದರೆ 4ಜಿಗಿಂತ 100 ಪಟ್ಟು ವೇಗದ ಇಂಟರ್ ನೆಟ್ ಸೇವೆ ದೊರೆಯಲಿದ್ದು, ಒಟಿಟಿ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಯಾಗಲಿದೆ. ಜೊತೆಗೆ ಗೇಮಿಂಗ್ ಹಾಗೂ ವಿಡಿಯೋ ಕ್ಷೇತ್ರದಲ್ಲೂ ಕ್ರಾಂತ್ರಿ ನಿರೀಕ್ಷಿಸಬಹುದಾಗಿದೆ.
ಇನ್ನು 5G ಸೇವೆಯ ಮೂಲ ದರ,ಬ್ಯಾಂಡ್ ಪ್ಲ್ಯಾನ್, ಸೆಕ್ರ್ಟಂ ಪ್ರಮಾಣ ಕುರಿತಂತೆ ದೂರಸಂಪರ್ಕ ಇಲಾಖೆಗೆ ಟ್ರಾಯ್ ಕೆಲವೊಂದು ಸಲಹೆಗಳನ್ನು ನೀಡಿದ್ದು, ಇದರ ಆಧಾರದಲ್ಲಿ ದರ ನಿಗದಿಯಾಗಲಿದೆ.
ಇನ್ನು 4ಜಿಗಿಂತ 5G ಸೇವೆಯ ದರ ಕಡಿಮೆಯಾಗಿರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಜಿಯೋ ಈಗಾಗಲೇ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟಿರುವ ಕಾರಣ 5G ಸೇವೆಯಲ್ಲೂ ದರ ಸಮರ ನಿರೀಕ್ಷಿಸಬಹುದಾಗಿದೆ.
Discussion about this post