ಸುಳ್ಯ : ವಿದ್ಯುತ್ ಶಾಕ್ ಹೊಡೆದು 4 ವರ್ಷದ ಮಗು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ಇಂದು ನಡೆದಿದೆ.
ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಆಲಿ ಎಂಬವರ ನಾಲ್ಕು ವರ್ಷದ ಮಗು ಆದಿಲ್ ಮೃತಪಟ್ಟಿದ್ದಾನೆ. ಆಲಿ ಅವರ ಪತ್ನಿ ತವರು ಮನೆ ಬೆಳ್ಳಾರೆಯ ಐವರ್ನಾಡು ಎಂಬಲ್ಲಿ ಈ ಘಟನೆ ನಡೆದಿದೆ. ಫ್ರಿಡ್ಜ್ ವಯರ್ ಸ್ಪರ್ಶಿಸಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಅನ್ನಲಾಗಿದೆ.
ಮೃತ ಬಾಲಕನ ತಂದೆ ಮನೆ ಪುತ್ತೂರಿನ ಕುಂಬ್ರ ಸಮೀಪದ ಘಟ್ಟಮನೆಯಾಗಿದ್ದು, ತಾಯಿಯ ತಾಯಿ ಮನೆಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ.
Discussion about this post