ನವದೆಹಲಿ : ಪಕ್ಷದ ವರಿಷ್ಟರ ಸೂಚನೆ ಬಂದ ಬೆನ್ನಲ್ಲೇ, ಗುಜರಾತ್ ಸಿಎಂ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2022ರ ಡಿಸೆಂಬರ್ ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಆಡಳಿತ ವಿರೋಧಿ ಅಲೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಈ ಬದಲಾವಣೆ ಎನ್ನಲಾಗಿದೆ. ಈ ಮೂಲಕ ಕೆಲವೇ ತಿಂಗಳ ಅಂತರದಲ್ಲಿ ಬಿಜೆಪಿ ಅಧಿಕಾರಿದಲ್ಲಿರುವ ಮೂರನೇ ರಾಜ್ಯದಲ್ಲಿ ಸಿಎಂ ಬದಲಾವಣೆ ಆದಂತಾಗಿದೆ.
ಕೊರೋನಾ ಸೇರಿದಂತೆ ಹಲವು ವಿಚಾರಗಳಲ್ಲಿ ರೂಪಾನಿ ಸರ್ಕಾರ ವಿಫಲವಾಗಿದ್ದು, ಈಗಾಗಲೇ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹೊಸ ಮುಖ್ಯಮಂತ್ರಿ ಆಯ್ಕೆ ಇಂದು ಮಧ್ಯಾಹ್ನ ನಡೆಯಲಿದ್ದು, ಈ ಸಂಬಂಧ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹಾಗೂ ನರೇಂದ್ರ ಸಿಂಗ್ ತೋಮರ್ ಈಗಾಗಲೇ ಗುಜರಾತ್ ತಲುಪಿದ್ದು, ವೀಕ್ಷಕರಾಗಿ ಪಾಲ್ಗೊಳ್ಳಲಿದ್ದಾರೆ.
ಇನ್ನು ನೂತನ ಮುಖ್ಯಮಂತ್ರಿಯಾಗಿ ಮನ್ಸುಖ್ ಮಾಂಡವೀಯಾ, ನಿತಿನ್ ಪಟೇಲ್, ಫಲ್ಡು ಪುರುಷೋತ್ತಮ್ ರೂಪಾಲಾ ಪೈಕಿ ಒಬ್ಬರು ಆಯ್ಕೆಯಾಗಲಿದ್ದಾರೆ.
2016ರಲ್ಲಿ ಆನಂದಿ ಬೆನ್ ರಾಜೀನಾಮೆ ಬಳಿಕ ರೂಪಾನಿ ಮೊದಲ ಸಲ ಸಿಎಂ ಆಗಿದ್ದರು. ಬಳಿಕ 2017ರಲ್ಲಿ ನಡೆದ ಚುನಾವಣೆಯಲ್ಲಿ ರೂಪಾನಿ ನೇತೃತ್ವದಲ್ಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.
Vijay Rupani’s resignation came with more than 14 months to go for his second term as CM. Considered an Amit Shah man, he had replaced Anandiben Patel in similar circumstances in August 2016, and celebrated five years of being in power recently.
Discussion about this post