ಬೆಂಗಳೂರು : ಹಿಜಾಬ್ ಕುರಿತಂತೆ ಬಂದಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಕದ ತಟ್ಟಿದ ಬೆನ್ನಲ್ಲೇ ನ್ಯಾಯಾಲಯದ ವಿರುದ್ಧವೇ ಹೋರಾಟ ನಡೆಸಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಸಭೆ ಸೇರಿದ ಮುಸ್ಲಿಂ ಮುಖಂಡರು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ನ ಕೆಲ ಮುಸ್ಲಿಂ ಶಾಸಕರು ಕೂಡಾ ಪಾಲ್ಗೊಂಡಿದ್ದರು ಅನ್ನಲಾಗಿದೆ.
ಈ ನಡುವೆ ನಾಳೆಯ ಬಂದ್ ಕುರಿತಂತೆ ಮಾತನಾಡಿರುವ ಮುಸ್ಲಿಂ ಮುಖಂಡ ಮೌಲನಾ ಮುಸ್ಕೂದ್ ಇಬ್ರಾನ್ ರಶೀದ್, ನಾಳೆ ಮನೆಯಿಂದ ಯಾರೂ ಕೂಡಾ ಹೊರಗೆ ಬರಬಾರದು. ಮೈದಾನಗಳಲ್ಲಿ ಸೇರಬಾರದು. Rally ನಡೆಸಬಾರದು. ಮುಸ್ಲಿಮ ವಿದ್ಯಾರ್ಥಿಗಳು ಶಾಲೆಗೆ ಹೋಗಬಾರದು. ಪ್ರತಿಭಟನೆ ನಡೆಸದೇ ಶಾಂತಿಯುತವಾಗಿ ನಮ್ಮ ನೋವು ತೋರಿಸಬೇಕು ಅಂದಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿಯಾದ ಮುಸ್ಲಿಂ ಮುಖಂಡರ ನಿಯೋಗ, ನಾಳಿನ ಬಂದ್ ಕುರಿತಂತೆ ಮಾಹಿತಿ ಹಂಚಿಕೊಂಡಿದೆ. ಈ ವೇಳೆ ಗುರುವಾರ ಹೊರಗಡೆ ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ. ಬಲವಂತವಾಗಿ ಅಂಗಡಿ ಮುಚ್ಚಿಸೋದಿಲ್ಲ. ಕಚೇರಿಗೆ ತೆರಳುವವರನ್ನು ತಡೆಯೋದಿಲ್ಲ ಎಂದು ಭರವಸೆ ನೀಡಿದ್ದಾರೆ.
Discussion about this post