ಡಿಕೆಶಿ ವಿರುದ್ಧ ಸೆಡ್ಡು ಹೊಡೆದಿದ್ದ ಜಮೀರ್ (Zameer Ahmed Khan ) ನಿಯಂತ್ರಿಸಲು ಸೋತಿದ್ದ ಕೆಪಿಸಿಸಿ ಎಐಸಿಸಿ ಮೊರೆ ಹೋಗಿತ್ತು. ನಾಳೆಯಿಂದ ಜಮೀರ್ ಹೇಗಿರುತ್ತಾರೆ ಅನ್ನುವುದೇ ಕುತೂಹಲ
ಬೆಂಗಳೂರು : ನಿಮ್ಮ ಸಾರ್ವಜನಿಕ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಸಿದ್ದರಾಮಯ್ಯ ಆಪ್ತರಾಗಿರುವ ಶಾಸಕ ಜಮೀರ್ ಅಹ್ಮದ್ ಖಾನ್ಗೆ (Zameer Ahmed Khan) ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep Surjewala) ಎಚ್ಚರಿಕೆ ರವಾನಿಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ರಣದೀಪ್ ಸಿಂಗ್ ಸುರ್ಜೇವಾಲ ಲಕ್ಷಣ ರೇಖೆಯ ಒಳಗಿರಿ ಎಂದು ಎಚ್ಚರಿಕೆ ರವಾನಿಸಿದ್ದಾರೆ.(Zameer Ahmed Khan )
ನಿಮ್ಮಂತ ಹಿರಿಯ ನಾಯಕರು ಪಕ್ಷದ ಲಕ್ಷ್ಮಣ ರೇಖೆಯೊಳೆಗೆ ಇರುವುದನ್ನು ಪಕ್ಷ ನಿರೀಕ್ಷೆ ಮಾಡುತ್ತದೆ. ಅವಶ್ಯವಲ್ಲದ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತದೆ ಮತ್ತು ವಾತಾವರಣ ಕೆಡಿಸುತ್ತದೆ. ಕಾಂಗ್ರೆಸ್ ಪಕ್ಷ ನಿಮ್ಮಿಂದ ಇಂತಹ ಹೇಳಿಕೆಯನ್ನು ಎಂದಿಗೂ ನಿರೀಕ್ಷೆ ಮಾಡುವುದಿಲ್ಲ. ನಿಮ್ಮ ಅನಾವಶ್ಯಕ ಹೇಳಿಕೆಗಳು ತಪ್ಪು ಸಂದೇಶವನ್ನು ರವಾನಿಸಿದ್ದು, ತಪ್ಪು ಅಭಿಪ್ರಾಯ ಮೂಡಿಸಿದೆ.(Zameer Ahmed Khan )
ಎಲ್ಲಾ ಜಾತಿ, ಜನಾಂಗ, ಸಮೂಹವನ್ನ ಒಳಗೊಳ್ಳುವುದು ಕಾಂಗ್ರೆಸ್ ಪಕ್ಷದ ಸಿದ್ದಾಂತ. ನೀವು ಈ ಸಿದ್ದಾಂತದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ. ಹೀಗಾಗಿ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಶಿಸ್ತು ಪಾಲಿಸಬೇಕು, ಪಕ್ಷದ ಸಿದ್ದಾಂತವನ್ನು ಎತ್ತಿಹಿಡಿಯಬೇಕು ಎಂದು ಪತ್ರದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಸುರ್ಜೇವಾಲ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : vijayanand kashappanavar : ಎರಡನೇ ಮದುವೆಯಾದ್ರ ವಿಜಯಾನಂದ ಕಾಶಪ್ಪನವರ : ಮಗುವಿನ ಜನನ ಪ್ರಮಾಣ ಪತ್ರ ವೈರಲ್
ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್. ಪಕ್ಷ ಪೂಜೆನೂ ಮಾಡ್ತಿನಿ, ಜೊತೆಗೆ ವ್ಯಕ್ತಿ ಪೂಜೆನೂ ಮಾಡ್ತಿನಿ, ನನ್ನ ಬಾಯಿ ಮುಚ್ಚೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹುಬ್ಬಳಿಯಲ್ಲಿ ಹೇಳಿದ್ದರು. ಆದರೆ ಇದೀಗ ಎಐಸಿಸಿ ಕಡೆಯಿಂದ ಪತ್ರ ಬಂದ ಮೇಲೆ ಬಾಯಿ ಮುಚ್ಚಿಕೊಂಡು ಇರಲೇಬೇಕು
Discussion about this post