ಕೊಪ್ಪಳ : 2015 ಜನವರಿ 11ರಂದು ಕೊಪ್ಪಳ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿತ್ತು. ಯಾರೋ ಹುಡುಗ ರೈಲ್ವೆ ಹಳಿಗೆ ಬಿದ್ದು ಮೃತಪಟ್ಟಿರಬೇಕು ಎಂದು ಅನುಮಾನಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಗ್ಲೇ ಇದೊಂದು ಕೆ ಅನ್ನುವ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ. ಯಾವಾಗ ಇದೊಂದು ವ್ಯವಸ್ಥಿತ ಕೊಲೆ ಅನ್ನುವುದು ಗೊತ್ತಾಯ್ತೋ, ರಾಜಕೀಯ ಒತ್ತಡದ ಕಾರಣದಿಂದ ಕೊಲೆ ಪ್ರಕರಣ ದಾಖಲಾಯ್ತು. ಜೊತೆಗೆ ಪ್ರಕರಣ ಗದಗ ರೈಲ್ವೆ ಪೊಲೀಸ್ ಠಾಣೆಯಿಂದ ಕೊಪ್ಪಳ ನಗರ ಠಾಣೆಗೆ ವರ್ಗಾವಣೆಯಾಯ್ತು. ಮಾತ್ರವಲ್ಲದೆ ಆಗ ಸಚಿವರಾಗಿದ್ದ ಶಿವರಾಜ್ ತಂಗಡಗಿ ತಮ್ಮ ಸ್ಥಾನಕ್ಕೂ ರಾಜೀನಾಮೆಯನ್ನು ಕೊಡಬೇಕಾಗಿ ಬಂತು. ಹೌದು ಇದು ಯಲ್ಲಾಲಿಂಗ ಕೊಲೆ ಪ್ರಕರಣದ ಹಿನ್ನಲೆ.
ಕೊಪ್ಪಳದ ಕನಕಗಿರಿ ತಾಲೂಕಿನ ಕನಕಾಪೂರ ನಿವಾಸಿ ಯಲ್ಲಾಲಿಂಗ ತಮ್ಮ ಗ್ರಾಮದ ಸಮಸ್ಯೆಯನ್ನು ಖಾಸಗಿ ವಾಹಿನಿ ಮುಂದೆ ಹೇಳಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಶಿವರಾಜ್ ತಂಗಡಗಿ ಆಪ್ತರಾದ ಹನುಮೇಶ್ ನಾಯಕ ಹಾಗೂ ಅವರ ಮಗ ಮಹಾಂತೇಶ ನಾಯಕ ಸೇರಿ 9 ಜನ ಕೊಲೆ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂತು.
ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಯ್ತು. ಹನುಮೇಶ್ ನಾಯಕ್ ಬಂಧನಕ್ಕೆ ಆಗ್ರಹಿಸಿ, ಈಗಿನ ಸಿಎಂ ಬಿಎಸ್ ಯಡಿಯೂರಪ್ಪ ಕೊಪ್ಪಳ ಬಂದು ಪ್ರತಿಭಟನೆ ಮಾಡಿದ್ದರು. ಜೊತೆಗೆ ತಂಗಡಗಿ ರಾಜೀನಾಮೆಗೂ ಆಗ್ರಹಿಸಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಸರ್ಕಾರ ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಿತು. ಇದಾದ ಬಳಿಕ ಹನುಮೇಶ ನಾಯಕ ಮಹಾಂತೇಶ್ ನಾಯಕ್ ಜೈಲು ಸೇರಿದರು. ಇದೀಗ ಆರೋಪಿಗಳು ಜಾಮೀನು ಮೇಲೆ ಹೊರಗಿದ್ದಾರೆ.
ಈ ಪೈಕಿ ಪ್ರಕರಣದ ಮೂರನೇ ಆರೋಪಿ ಮಹಾಂತೇಶ್ ನಾಯಕ ಮದುವೆ ಕೊಪ್ಪಳ ಜಿಲ್ಲೆಯ ಹುಲಿ ಹೈದರ್ ಗ್ರಾಮದಲ್ಲಿ ನಡೆದಿದೆ. ಈ ಮದುವೆಗೆ ಗಂಗಾವತಿ ಸಿಪಿಐ ಉದಯರವಿ, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಕನಕಗಿರಿ ಪಿಎಸ್ಐ ತಾರಾಬಾಯಿ ಹಾಜರಾಗಿದ್ದಾರೆ.
ಒಬ್ಬ ಕೊಲೆ ಆರೋಪಿಯ ಮದುವೆಯಲ್ಲಿ ಪೊಲೀಸರು ಭಾಗಿಯಾಗುತ್ತಾರೆ ಅಂದ್ರೆ ಸಮಾಜಕ್ಕೆ ಅದ್ಯಾವ ಸಂದೇಶ ಹೋಗುತ್ತದೆ. ಕಾನೂನು ರಕ್ಷರಾದ ಖಾಕಿಗಳೇ ಹೀಗೆ ದಾರಿ ತಪ್ಪುತ್ತಿರುವುದು ಕೊರೋನಾಗಿಂತ ಅಪಾಯಕಾರಿ ಬೆಳವಣಿಗೆ
Discussion about this post