ಲಂಚ ತಪ್ಪಿದ್ರೆ ಮಂಚ. FIR ದಾಖಲಿಸಿಕೊಳ್ಳಬೇಕಾದ್ರೆ 5 ಲಕ್ಷ ರೂಪಾಯಿ ಲಂಚ ತಪ್ಪಿದ್ರೆ ಕರೆದಾಗಲೆಲ್ಲಾ ಮಂಚ
ಬೆಂಗಳೂರು : ಕರ್ನಾಟಕ ಪೊಲೀಸ್ ಅಂದ್ರೆ ವಿಶ್ವ ಮಟ್ಟದಲ್ಲೊಂದು ಗೌರವ. ಕರ್ನಾಟಕದ ಖಾಕಿ ಅಂದ್ರೆ ಹೆಮ್ಮೆ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪೊಲೀಸರಿಗೆ ಇರೋ ಗೌರವವನ್ನು ಕಳೆಯಲು, ಮಸಿ ಬಳಿಯಲು ಕೆಲ ಪೊಲೀಸ್ ಅಧಿಕಾರಿಗಳೇ ಮುಂದಾಗಿದ್ದಾರೆ. ಹೀಗಾಗಿ ನಿಷ್ಠಾವಂತ, ಪ್ರಾಮಾಣಿಕ ಪೊಲೀಸರು ಸಮಾಜದ ಮುಂದೆ ತಲೆ ತಗ್ಗಿಸುವಂತಾಗಿದೆ.
ಹೀಗೆ ಬಾಡಿಗೆದಾರರ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೆಣ್ಣೂರು ಠಾಣೆಯ ಇನ್ಸ್ ಪೆಕ್ಟರ್ ವಸಂತಕುಮಾರ್ ವಿರುದ್ಧ ಕೇಳಿ ಬಂದಿದೆ.
ಈ ಸಂಬಂಧ ಸಂತ್ರಸ್ಥೆ ನಗರ ಪೊಲೀಸ್ ಆಯುಕ್ತ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ನಾನು, ನನ್ನ ಪತಿ ಹಾಗೂ ಮೂರು ಮಕ್ಕಳ ಜೊತೆ ಶಕ್ತಿನಗರದಲ್ಲಿ ವಾಸವಾಗಿದ್ದೇನೆ. ನಮ್ಮ ಮನೆಯನ್ನು ಸುಮತಿ ಅನ್ನುವವರು 7 ವರ್ಷಗಳ ಲೀಸ್ ಗೆ ಪಡೆದಿದ್ದರು. ಜನವರಿ 13 ರಂದು ಅವರ ಮನೆಗೆ ನೀರಿನ ಬಿಲ್ ಕೊಡಲು ಹೋದ ವೇಳೆ ವರಲಕ್ಷ್ಮಿ ಮತ್ತು ಸುಮತಿ ಕುಟುಂಬ ನಮ್ಮ ಮೇಲೆ ಗಲಾಟೆ ಮಾಡಿದೆ. ಮಾತ್ರವಲ್ಲದೆ ಅವರ ಪತಿ ನನ್ನ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಜೊತೆಗೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಲು ಹೆಣ್ಣೂರು ಠಾಣೆಗೆ ತೆರಳಿದ್ರೆ. ಅಲ್ಲಿದ್ದ ಇನ್ಸ್ ಪೆಕ್ಟರ್ ದೂರು ದಾಖಲಿಸಿಕೊಳ್ಳಲು 5 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ. ಲಂಚ ಕೊಟ್ಟಿಲ್ಲ ಅಂದ್ರೆ ನಾನು ಬಯಸಿದಾಗಲೆಲ್ಲಾ ನೀನು ನನ್ನೊಂದಿಗೆ ಇರಬೇಕು ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದ್ರೆ ನನ್ನ ಮೇಲೆ ಹಲ್ಲೆ ಮಾಡಿ, ಠಾಣೆಯನ್ನೇ ನನ್ನ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ದೂರು ಸ್ವೀಕರಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ವಿಚಾರಣೆ ನಡೆಸಿ ವರದಿ ನೀಡುವಂತೆ ಬಾಣಸವಾಡಿ ಉಪವಿಭಾಗದ ಎಸಿಪಿಯವರಿಗೆ ಸೂಚಿಸಿದ್ದಾರೆ.
ಇನ್ನು ಈ ಇನ್ಸ್ ಪೆಕ್ಟರ್ ವಸಂತ್ ಹಿನ್ನಲೆ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಮಹಿಳಾ ಪಿಎಸ್ಐ ಒಬ್ಬರ ಜೊತೆಗೂ ಕೆಲ ವಾರಗಳ ಹಿಂದೆ ಅಸಭ್ಯವಾಗಿ ವರ್ತಿಸಿದ್ದರಂತೆ. ಕೈ ಹಿಡಿದು ಎಳೆದಾಡಿದ್ದರಂತೆ. ಈ ಸಂಬಂಧ ಮಹಿಳಾ ಅಧಿಕಾರಿಯ ಕುಟುಂಬಸ್ಥರು ಠಾಣೆಗೆ ಬಂದು ಗಲಾಟೆ ಮಾಡಿದ ವೇಳೆ ಇದೇ ವಸಂತ್ ಕ್ಷಮೆಯಾಚನೆ ಮಾಡಿದ್ದರಂತೆ.
ಒಟ್ಟಿನಲ್ಲಿ ಕರ್ನಾಟಕ ಪೊಲೀಸ್ ಅಂದ್ರೆ ಎದೆಯುಬ್ಬಿಸಿ ಮಾತನಾಡದ ಪರಿಸ್ಥಿತಿಯನ್ನು ಕೆಲ ಅಧಿಕಾರಿಗಳು ತಂದೊಡ್ಡಿದ್ದಾರೆ.
Discussion about this post