ಬೆಂಗಳೂರು : ನವೆಂಬರ್ ಪ್ರಾರಂಭದಲ್ಲಿ ಇಳಿಕೆ ಕಂಡಿದ್ದ ಚಿನ್ನದ ದರ ನವೆಂಬರ್ 5ರ ನಂತರ ಏರಿಕೆ ಕಾಣತೊಡಗಿದೆ. ನವೆಂಬರ್ 9 ರಂದು ಒಂದಿಷ್ಟು ಇಳಿಕೆ ಕಾಣುವ ಮೂಲಕ ಚಿನ್ನ ಖರೀದಿದಾರರು ಹೊಸ ಕನಸು ಕಾಣುವಂತೆ ಮಾಡಿತ್ತು. ಆದರೆ ಅದು ಒಂದು ದಿನದ ಆಟವಾಗಿತ್ತು. ನವೆಂಬರ್ 10 ರ ಬಳಿಕ ದರ ರಾಕೆಟ್ ವೇಗ ಪಡೆದುಕೊಂಡಿತ್ತು.
ಇಂದು ಕರ್ನಾಟಕದಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನಕ್ಕೆ 45,900 ರೂಪಾಯಿಗಳಷ್ಟಿದ್ದು, 24 ಕ್ಯಾರೆಟ್ ಚಿನ್ನಕ್ಕೆ 50,070 ರೂಪಾಯಿ ದಾಖಲಾಗಿದೆ. ಅಂದ್ರೆ 10 ಗ್ರಾಮ್ ಚಿನ್ನಕ್ಕೆ ಅರ್ಧ ಲಕ್ಷ ರೂಪಾಯಿ. ಹೀಗಾಗಿ ಆಭರಣ ಖರೀದಿಸುವುದಾದ್ರೆ ಮಜೂರಿ, ವೆಸ್ಟೇಜ್ ಎಲ್ಲಾ ಕಳೆದರೆ 10 ಗ್ರಾಂ ತೂಕದ ಆಭರಣಕ್ಕೆ ಅರ್ಧ ಲಕ್ಷಕ್ಕೂ ಅಧಿಕ ಹಣ ಕೊಡಬೇಕಾಗುತ್ತದೆ. ಹೀಗಾಗಿ ಮದುವೆ ಕಾರ್ಯಕ್ಕೆ ಚಿನ್ನ ಖರೀದಿಸಲು ಮುಂದಾದವರಿಗೆ ದೊಡ್ಡ ಹೊರೆಯೇ ಸರಿ.
Discussion about this post