ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆ ತಗ್ಗಿದೆ. ಮೂರನೇ ಅಲೆ ಯಾವಾಗ ಬರುತ್ತದೋ ಎಂದು ಜನ ಆತಂಕದಿಂದ ಕಾಯುತ್ತಿದ್ದಾರೆ. ಈ ನಡುವೆ ಕೊರೋನಾ ಸೋಂಕು ಸೋಲಿಸುವ ನಿಟ್ಟಿನಲ್ಲಿ ಜನ ಲಸಿಕೆ ಪಡೆಯುತ್ತಿದ್ದಾರೆ. ಆದರೆ ಹಲವಾರು ಮಂದಿ ಇನ್ನೂ ಲಸಿಕೆ ಬಗ್ಗೆ ನಿರ್ಲಕ್ಷ್ಯ ತಳೆದಿದ್ದಾರೆ.
ಹೀಗೆ ಲಸಿಕೆ ಪಡೆಯದ ಮಂದಿಗೆ ಇನ್ನೂ ಆತಂಕವಿದೆ ಅನ್ನುವುದು ಸ್ಪಷ್ಟ. ಯಾಕಂದ್ರೆ ಎರಡನೆ ಅಲೆಯ ಕೊನೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವ ಬಹುತೇಕರು ಲಸಿಕೆ ಪಡೆಯದವರೇ ಆಗಿದ್ದಾರೆ. ಮಾತ್ರವಲ್ಲದೆ ಹೀಗೆ ಲಸಿಕೆ ಪಡೆಯದವರು ನೇರವಾಗಿ ಐಸಿಯುಗೆ ದಾಖಲಾಗುತ್ತಿದ್ದಾರೆ. ಈ ಮಾಹಿತಿಯನ್ನು ಬಿಬಿಎಂಪಿಯೇ ಕೊಟ್ಟಿದ್ದು, ಕಳೆದ 14 ದಿನಗಳಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಕೊರೋನಾ ಸೋಂಕಿತರ ಪೈಕಿ ಶೇ.78.5ರಷ್ಟು ಮಂದಿ ಲಸಿಕೆಯ ಬಗ್ಗೆ ತಾತ್ಸಾರ ತೋರಿದವರೇ ಇದ್ದಾರಂತೆ.
ಆಸ್ಪತ್ರೆಗಳಲ್ಲಿ ದಾಖಲಾಗಿರುವವರ ಮಾಹಿತಿಗಳನ್ನು ನೋಡಿದರೆ ಲಸಿಕೆಯನ್ನು ಹಾಕಿಸಿಕೊಳ್ಳದವರು ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ. ಹಾಗಂತ ಎರಡೂ ಡೋಸ್ ಲಸಿಕೆ ಪಡೆದುಕೊಂಡವರು ಸೇಫ್ ಆಗಿದ್ದಾರೆಯೇ ಖಂಡಿತಾ ಇಲ್ಲ. ಅವರು ಕೂಡಾ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಈ ಸಂಖ್ಯೆ ತೀರಾ ವಿರಳವಾಗಿದೆ.
Discussion about this post