ಅಮ್ಮಾ ಯಾವತ್ತು ಚುನಾವಣೆ ನಿಲ್ಲುತ್ತೇನೆ ಅಂದ್ರೋ, ಅಮ್ಮಾ ನಿಂತುಕೊಳ್ಳಿ ನಾವು ನಿಮ್ಮ ಜೊತೆಗಿದ್ದೇವೆ ಅಂದೆವು. ಸುಖದ ಸಮಯದಲ್ಲಿ ಆ ಮನೆ ನಮ್ಮ ಜೊತೆಗಿತ್ತು. ಹೀಗಾಗಿಯೇ ನಾವು ಈಗ್ಲೂ ಅವರ ಜೊತೆಗೆ ನಿಂತಿದ್ದೇವೆ. ನಾವು ತಿನ್ನೋಕೆ ಕುಡಿಯೋಕೆ ಮಾತ್ರನಾ ಆ ಮನೆಯಲ್ಲಿ ಇರಲಿಲ್ಲ ಎಂದು ನಟ ದರ್ಶನ್ ಹೇಳಿದ್ದಾರೆ.
ಮಂಡ್ಯದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಅಮ್ಮನ ಜೊತೆ ಜೋಡೆತ್ತು ತರ ನಿಂತೆವು ಕಣ್ಣಯ್ಯ ನಾವು ಏನಿವಾಗ… ಏನಯ್ಯ ಇವಾಗ ಎಂದು ಗುಡುಗಿದರು.
ಕಳ್ಳತನ, ದರೋಡೆ, ರೇಪ್, ಮರ್ಡರ್ ಮಾಡಿದ್ದೀವಾ ನಾವು. ಎನಕ್ಕೆ ಹೆದರಿಕೊಳ್ಳಬೇಕು. ಅಮ್ಮ ನಿಂತ್ರು ನಾವು ಪಕ್ಕಕ್ಕೆ ಬಂದು ನಿಂತುಕೊಂಡೆವು.ಅದಕ್ಕೆ ಎಲ್ಲಾ ತೆಗೆದ್ರು, ತೆಗೆಯಲಿ ಬಿಡಿ, ಜಗಳ ಏನು ಯಾರ ಮನೆಯಲ್ಲಿ ನಡೆದಿಲ್ವ.
ಇದೇ ವೇಳೆ ಕುಮಾರಸ್ವಾಮಿಗೆ ತಿರುಗೇಟು ದರ್ಶನ್ ಕಲಾವಿದರು…ಕಲಾವಿದರು ಅಂತಾರಲ್ಲ ಅವರು, ಹಾಗಾದ್ರೆ ಇವರೇನು ಎಂದು ಪ್ರಶ್ನಿಸಿದರು.
Discussion about this post