ಶಿವಮೊಗ್ಗ : ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ವಿಸ್ಟಾಡೋಮ್ ಬೋಗಿ ಅಳವಡಿಸಿದ ರೈಲು ಈಗಾಗಲೇ ಮಂಗಳೂರು ಬೆಂಗಳೂರು ನಡುವೆ ಸಂಚರಿಸುತ್ತಿದ್ದು, ವಿಸ್ಟಾಡೋಮ್ ಬೋಗಿಯ ಸೀಟುಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಹಲವು ವಾರಗಳ ಕಾಲಕ್ಕೆ ಬುಕ್ಕಿಂಗ್ ಕೂಡಾ ಆಗಿದೆ.
ಈ ನಡುವೆ ಎರಡನೇ ವಿಸ್ಟಾಡೋಮ್ ಬೋಗಿಯನ್ನು ಹೊಂದಿರುವ ರೈಲು ಸಂಚಾರ ಪ್ರಾರಂಭಗೊಂಡಿದ್ದು ಯಶವಂತಪುರ-ಶಿವಮೊಗ್ಗ ಇಂಟರ್ಸಿಟಿ ರೈಲು ಶನಿವಾರ ಸಂಚರಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೈಲ್ವೆ ಇಲಾಖೆ ರೈಲುಗಳಿಗೆ ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸುತ್ತಿದ್ದು, ರಾಜ್ಯದಲ್ಲಿ ವಿಸ್ಟಾಡೋಮ್ ಹೊಂದಿರುವ ಎರಡನೇ ರೈಲು ಇದಾಗಿದೆ.
ಆದರೆ ಈ ಇಂಟರ್ಸಿಟಿ ರೈಲಿನಲ್ಲಿ 44 ಸೀಟುಗಳ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದ್ದು, ಮೊದಲ ದಿನ ಯಶವಂತಪುರದಿಂದ ಶಿವಮೊಗ್ಗಕ್ಕೆ 18 ಮಂದಿ ಹಾಗೂ ಶಿವಮೊಗ್ಗದಿಂದ ಬೆಂಗಳೂರಿಗೆ ಕೇವಲ 7 ಮಂದಿ ಪ್ರಯಾಣ ಬೆಳೆಸಿದ್ದಾರೆ.
ಅಂದ ಹಾಗೇ ಯಶವಂತಪುರದಿಂದ ಶಿವಮೊಗ್ಗಕ್ಕೆ ವಿಸ್ಟಾಡೋಮ್ ಬೋಗಿ ಒಂದು ಸೀಟಿಗೆ 1,130 ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ.
Discussion about this post