ಕನ್ನಡತಿ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಧಾರವಾಹಿ, ಕಥೆ ಮತ್ತು ನಟನೆಯ ಕಾರಣದಿಂದ ದನಮನ ಗೆಲ್ಲುವಲ್ಲಿ ಕನ್ನಡತಿ ಯಶಸ್ವಿಯಾಗಿದೆ. ವಾಸ್ತವಕ್ಕೆ ಹತ್ತಿರವಿಲ್ಲದ, ನಡು ರಸ್ತೆಯಲ್ಲಿ ಗೂಳಿಯನ್ನು ಸೋಲಿಸುವ ಸೀರಿಯಲ್ ಗಿಂತ ಈ ಧಾರವಾಹಿ ಅದ್ಭುತವಾಗಿದೆ. ಕಾರಿನ ಗಾಜಿನ ಮೇಲೆ ಪಾದ ಊರಿದರೂ ಗಾಸ್ಲ್ ಒಡೆಯದಿರುವ ಸೀರಿಯಲ್ ನಡುವೆ ಕನ್ನಡತಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದೆ.
ಇನ್ನು ಎಪಿಸೋಡ್ ನಿಂದ ಎಪಿಸೋಡ್ ಗೆ ಕುತೂಹಲ ಮೂಡಿಸುತ್ತಿರುವ ಕನ್ನಡತಿಗೆ ಹೊಸ ಪಾತ್ರವೊಂದು ಎಂಟ್ರಿಯಾಗಲಿದೆ. ಭವಿಷ್ ಅನ್ನುವ ಪಾತ್ರವನ್ನು ತರಲು ಮುಂದಾಗಿರುವ ನಿರ್ದೇಶಕರು ಹವಿ ಜೋಡಿ ಮುಂದೇನು ಅನ್ನುವ ಪ್ರಶ್ನೆಗೆ ಟ್ವಿಸ್ಟ್ ಕೊಡಲಿದ್ದಾರೆ.
ಅಂದ ಹಾಗೇ ಭವಿಷ್ ಪಾತ್ರವನ್ನು ವಿನಯ್ ಕಶ್ಯಪ್ ನಿರ್ವಹಿಸಲಿದ್ದಾರೆ. ಈ ವಿನಯ್ ಕಶ್ಯಪ್ ಸೇವಂತಿ, ಹಿಟ್ಲರ್ ಕಲ್ಯಾಣ ಧಾರವಾಹಿಗಳಲ್ಲಿ ಬ್ಯುಸಿಯಾಗಿದ್ದು, ಕಿರುತೆರೆಯಲ್ಲಿ ಬೇಡಿಕೆಯ ನಟರಾಗಿದ್ದಾರೆ. ಇವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಕನ್ನಡತಿಗೆ ಕರೆ ತರಲಾಗುತ್ತಿದೆ.
Discussion about this post